ಕಡ್ಡಾಯವಾಗಿ ಮಾದಿಗ ಎಂದು ನಮೂದಿಸಿ

8kdr2 (1)
Published on

ಕಡೂರು: ಏ.6 ರಿಂದ 21ರವರೆಗೆ ನಡೆಯಲಿರುವ ಒಳ ಮೀಸಲಾತಿ ಸಂಬಂಧ ಜಾತಿ ಗಣತಿಯ ಮನೆ ಮನೆಗೆ ಸಮೀಕ್ಷೆ ತಂಡ ಭೇಟಿ ನೀಡಲಿದ್ದು, ಸಮುದಾಯದ ಬಂಧುಗಳು ನಿಖರವಾಗಿ ಎಸ್‌ಸಿ ಮಾದಿಗ ಸಮುದಾಯದವರು ಪ್ರಮಾಣ ಪತ್ರದಲ್ಲಿ ಮಾದಿಗ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಸ್ವಾಭಿಮಾನಿ ಸಮಾಜದ ತಾಲೂಕು ಅಧ್ಯಕ್ಷ ಲೋಕೇಶಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ತಾಲೂಕು ಸ್ವಾಭಿಮಾನಿ ಮಾದಿಗ ಸಮಾಜ ಮತ್ತು ಸ್ವಾಭಿಮಾನಿ ಮಾದಿಗ ಸಮಾಜ ಟ್ರಸ್ಟ್ ನಿಂದ ಗ್ರಾಮಗಳಿಗೆ ತೆರಳಿ ಜಾತಿ ಗಣತಿಯ ನಮೂದನೆ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ಜಾಥಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಯಾವುದೇ ಇದ್ದರೂ ಮೂಲ ಜಾತಿಯಾದ ಮಾದಿಗ ಎಂದು ನಮೂದಿಸಿದಾಗ ಮಾತ್ರ ಮೀಸಲಾತಿಯ ಸೌಲಭ್ಯಗಳು ನೇರವಾಗಿ ದೊರೆಯಲಿದೆ ಎಂದರು.

ದೌರ್ಜನ್ಯ ಸಮಿತಿ ಜಿಲ್ಲಾ ಸದಸ್ಯ ಶಂಕರ್, ತಿಮ್ಮಯ್ಯ, ಕಲ್ಯಾಣ್, ಚಂದ್ರಪ್ಪ, ವಾಸು, ಕೃಷ್ಣಮೂರ್ತಿ, ರಾಮಣ್ಣ, ಅಂಜನಪ್ಪ, ಪ್ರಮೋದ್, ಈಶ್ವರಪ್ಪ, ಕೃಷ್ಣಪ್ಪ, ಸುನಿಲ್, ಜಗದೀಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net