ರಾಘವೇಂದ್ರ ಮಂದಿರದಲ್ಲಿ ಮಧ್ಯಾರಾಧನೆ

21 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಹನುಮಂತನಗರದ ಶ್ರೀ ಕೃಷ್ಣ, ಶ್ರೀ ರಾಘವೇಂದ್ರ ಮಂದಿರದಲ್ಲಿ ಗುರುರಾಘವೇಂದ್ರರ 353ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಪ್ರಯುಕ್ತ ಬುಧವಾರ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆ ಸುಪ್ರಭಾತ, ಹರಿ ವಾಯುಸ್ತುತಿ ಪುನಃಶ್ಚರಣ, ರಾಯರ ಅಷ್ಟೋತ್ತರ ಸಾಮೂಹಿಕ ಪಠಣ, ಗುರುಸಾರ್ವಭೌಮರಿಗೆ ಕ್ಷೀರಾಭಿಷೇಕ, ನೈವೇದ್ಯ, ಮಹಾಪಂಚಾಮೃತ ಅಭಿಷೇಕ ನಡೆಯಿತು.
ಪಂ. ಅನಂತಕೃಷ್ಣ ಕಾರಂತ ಅವರು ರಾಯರ ಜೀವನ ಚರಿತ್ರೆ ಹಾಗೂ ಅನುಗ್ರಹ ಬಗ್ಗೆ ಪ್ರವಚನ ನೀಡಿದರು. ಮಧ್ಯಾಹ್ನ ಮಹಾಪೂಜೆ, ನಂತರ ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು. ಸಂಜೆ ಪಲ್ಲಕ್ಕಿ ಸೇವೆ, ರಥೋತ್ಸವ, ಡೋಲೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪ, ಸ್ವಸ್ತಿವಾಚನ ನಡೆದವು. ಸಹಸ್ರಾರು ಭಕ್ತರು ಗುರುಗಳ ದರ್ಶನ ಪಡೆದರು. ಮೂಲವೃಂದಾವನಕ್ಕೆ ವಿವಿಧ ಹಣ್ಣುಗಳಿಂದ ಅಭಿಷೇಕ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net