ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕರೆ

ravi deshpande
Published on

ಹುಬ್ಬಳ್ಳಿ: ಮಧ್ಯಪ್ರದೇಶದ ಓಂಕಾರೇಶ್ವರ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ಸೆ. 18ರಂದು ಆಯೋಜಿಸಿರುವ 108 ಅಡಿ ಎತ್ತರದ ಶ್ರೀ ಶಂಕರಾಚಾರ್ಯರ ಲೋಹದ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಧಾರವಾಡದ ಅದ್ವೈತ ಪ್ರಬೋಧಕ ಸಂಘದ ಅಧ್ಯಕ್ಷ ರವಿ ದೇಶಪಾಂಡೆ ಭಾಗವಹಿಸಲಿದ್ದಾರೆ. ಶ್ರೀ ಶೃಂಗೇರಿ ಶಾರದಾ ಪೀಠದ ಪ್ರತಿನಿಧಿಯಾಗಿ ದೇಶಪಾಂಡೆ ಸೇರಿ ಕರ್ನಾಟಕದಿಂದ 7 ಜನರು ಪಾಲ್ಗೊಳ್ಳುವರು. ಇವರು ಸೆ. 17ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸುವರು.

MADHYAPRADESH GOVT, INVITES RAVI DESHPANDE, AND OTHERS,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net