ವಾದಿರಾಜಾಶ್ರಮದಲ್ಲಿ ಮಧ್ಯಾರಾಧನೆ ಸಡಗರ

1 anr madyaradhane alankara
ಮಧ್ಯಾರಾಧನೆ ಅಂಗವಾಗಿ ಹೊಸೂರು ಗ್ರಾಮದ ವಾದಿರಾಜಾಶ್ರಮದಲ್ಲಿರುವ ರಾಘವೇಂದ್ರ ವೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
Published on

ಆಯನೂರು: ಹೊಸೂರು ಗ್ರಾಮದ ತಪೋವನ ವಾದಿರಾಜಾಶ್ರಮದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ನಿಮಿತ್ತ ಎರಡನೇ ದಿನವಾದ ಶುಕ್ರವಾರ ಮಧ್ಯಾರಾಧನೆಯು ಶ್ರದ್ಧಾ ಭಕ್ತಿ, ಸಡಗರಗಳಿಂದ ನೆರವೇರಿತು.

ಆಯನೂರು ಹಾಗೂ ಸುತ್ತಲಿನ ನೂರಾರು ಭಕ್ತರು ಆಗಮಿಸಿದ್ದರು. ಗೋಪಿನಾಥ ರಾವ್, ಎಚ್.ಎಸ್.ಹುಚ್ಚುರಾವ್ ಪ್ರವಚನ ನಡೆಸಿಕೊಟ್ಟರು. ಮಹಿಳೆಯರಿಂದ ರಾಘವೇಂದ್ರ ಸ್ತುತಿ ಹಾಗೂ ಕೀರ್ತನಾ ಕಾರ್ಯಕ್ರಮ ನಡೆಯಿತು. ಸಂಜೆ ದೇವಸ್ಥಾನದ ಆವರಣದಲ್ಲಿ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಇದರ ಜತೆಗೆ ಎಂದಿನಂತೆ ಹರಿವಾಯು ಸ್ತುತಿ ಹಾಗೂ ರಾಘವೇಂದ್ರ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಸರ್ವಸೇವೆ, ತೀರ್ಥ ಪ್ರಸಾದ ಮತ್ತು ಮಹಾಮಂಗಳಾರತಿ ನಡೆಯಿತು. ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಅಚ್ಚುತರಾವ್, ಕಾರ್ಯದರ್ಶಿಗಳು, ಟ್ರಸ್ಟಿಗಳು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net