

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವ ಸೃಷ್ಟಿಯಾದರೆ ಅದಕ್ಕೊಬ್ಬ ಸೃಷ್ಟಿಕರ್ತ ಇರಲೇಬೇಕು. ನಾವು ಭಗವಂತನ ಹತ್ತಿರ ಹೋಗಬಹುದೆ ಹೊರತು ಭಗವಂತನಾಗಲು ಸಾಧ್ಯವಿಲ್ಲ. ಇದೇ ಮಧ್ವಾಚಾರ್ಯರು ಸ್ಥಾಪಿಸಿದ ದ್ವೆ$ೈತ ಸಿದ್ಧಾಂತ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಸ್ನೇಹ ಪ್ರಕಾಶನ, ವರಧನ್ವಂತರಿ ೌಂಡೇಶನ್ ಟ್ರಸ್ಟ್ ಹಾಗೂ ಅಖಿಲ ಭಾರತ ಮಾಧ್ವ ಮಹಾ ಮಂಡಳ ವತಿಯಿಂದ ಆಯೋಜಿಸಿರುವ ವಸಂತ ವ್ಯಾಖ್ಯಾನ ಮಾಲೆ ಉಪನ್ಯಾಸದ 2ನೇ ದಿನವಾದ ಶನಿವಾರ ಮಧ್ವಾಚಾರ್ಯರ ಕುರಿತು ಅವರು ಮಾತನಾಡಿದರು.
ಬಾಲ್ಯದಿಂದಲೇ ಮಧ್ವಾಚಾರ್ಯರು ಅನೇಕ ಪವಾಡಗಳಿಗೆ ಕಾರಣರಾದವರು. ಭೀಮಸೇನನ ಅವತಾರವಾಗಿದ್ದರಿಂದ ಶಾರೀರಿಕವಾಗಿಯೂ ಸದೃಢರಾಗಿದ್ದರು. ಬಾಲ್ಯದ ವಾಸುದೇವ ಗುರುಕುಲದ ವ್ಯಾಸಂಗದಲ್ಲೂ ಬಹಳ ಚುರುಕು. ಮುಂದೆ ಉಡುಪಿಯಲ್ಲಿ ಅಚ್ಯುತ ಪ್ರೇಕ್ಷ ಎಂಬ ಋಷಿಯ ಶಿಷ್ಯತ್ವ ಪಡೆದರು. ನಂತರ ಸನ್ಯಾಸ ಸ್ವೀಕರಿಸಿ ರ್ಪೂಣಪ್ರಜ್ಞ ತೀರ್ಥರು ಎಂಬ ಹೆಸರು ಪಡೆದಾಗ ಅವರಿಗೆ ಕೇವಲ 10 ವರ್ಷ ವಯಸ್ಸು ಎಂದರು.
ಮರುವರ್ಷವೇ ವೇದಾಂತ ಪೀಠದ ಅಧಿಪತಿಯಾಗಿ ಆನಂದ ತೀರ್ಥರು ಎಂಬ ಹೆಸರು ಪಡೆದು, ಮಧ್ವಾಚಾರ್ಯರೆಂದೇ ಲೋಕ ವಿಖ್ಯಾತರಾದರು. ತತ್ವಜ್ಞಾನ ಹಾಗೂ ತಂತ್ರಶಾಸ್ತ್ರ ಎರಡನ್ನು ಅರ್ಥೈಸಿಕೊಂಡವರು ಪರಿರ್ಪೂಣ ಗುರುವಾಗಬಲ್ಲರು. ಅಂತಹ ಗುರು ಮಧ್ವಾಚಾರ್ಯರಾಗಿದ್ದರು. ಅವರಿಗೆ 7 ಕೋಟಿ ಮಂತ್ರಗಳು ಹೃದ್ಗತವಾಗಿತ್ತು ಎಂದು ಸ್ವತಃ ರಾಘವೇಂದ್ರ ಸ್ವಾಮಿಗಳು ಉಲ್ಲೇಖಿಸಿದ್ದಾರೆ. ಬದರಿಯಲ್ಲಿ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದ ಮಧ್ವಾಚಾರ್ಯರು ಮುಂದೆ ಉಡುಪಿಯಲ್ಲಿ ನೆಲೆ ಕಂಡರು ಎಂದರು.
ಸ್ನೇಹ ಪ್ರಕಾಶನದ ಅಧ್ಯಕ್ಷ ಹರ್ಷ ಡಂಬಳ, ವರಧನ್ವಂತರಿ ಫೌಂಡೇಶನ್ ಅಧ್ಯಕ್ಷ ಡಾ. ಪ್ರಮೋದ ಗಾಯಿ, ದೀಪಕ ಆಲೂರು, ಎಚ್.ವಿ. ಕಾಖಂಡಕಿ ಇತರರು, ಇದ್ದರು.