ಪಾಜಕಕ್ಷೇತ್ರದಲ್ಲಿ ಮಧ್ವನವಮಿ

IMG-20240119-WA0024
Published on

ಉಡುಪಿ: ಮಧ್ವಾಚಾರ್ಯರ ಜನ್ಮಸ್ಥಳ ಪಾಜಕಕ್ಷೇತ್ರದಲ್ಲಿ ಮಧ್ವನವಮಿಯ ಪ್ರಯುಕ್ತ ವಾದಿರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತ ಆಚಾರ್ಯ ಮಧ್ವರ ಪ್ರತಿಮೆಗೆ ಪಾಜಕದ ಆಡಳಿತದಾರ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಪ್ರಾತ@ಕಾಲದಿಂದ ನಿಮಾರ್ಲ್ಯವಿಸರ್ಜನೆ, ಉಷ@ಕಾಲ ಪೂಜೆ, ಪಂಚಾಮೃತ ಅಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀಪಾದರ ಉಪಸ್ಥಿತಿಯಲ್ಲಿ ಸಂಹಿತ ಯಾಗದ ಪೂರ್ಣಾಹುತಿ, ಅವಭೃತ ಸ್ನಾನ ನಡೆಯಿತು. ಈ ಸಂದರ್ಭದಲ್ಲಿ ವಿದ್ವಾಂಸರಾದ ಪ್ರಭಂಜನ ಆಚಾರ್ಯ ವ್ಯಾಸನಕೆರೆ, ಸಗ್ರಿ ರಾಘವೇಂದ್ರ ಆಚಾರ್ಯ, ಅರ್ಚಕರಾದ ಮಾಧವ ಉಪಾಧ್ಯಾಯ, ಕಲ್ಮಂಜೆ ವಾಸುದೇವ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net