ನವನಗರದಲ್ಲಿ ಸಂಭ್ರಮದ ಮಧ್ವ ನವಮಿ

IMG_20240218_203643_823.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿ ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ ಭಾನುವಾರ ಮಧ್ವ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಧ್ವ ನವಮಿ ಪೂರ್ವಭಾವಿಯಾಗಿ ಶ್ರೀಧರ ಕುಲಕಣಿರ್ ಅವರ ನಿವಾಸದಲ್ಲಿ ಪಂ. ಕಪಿಲಾಚಾರ್ಯ ಗಲಗಲಿ ಅವರಿಂದ ಪ್ರವಚನ ಏರ್ಪಡಿಸಲಾಗಿತ್ತು. ಬದರಿ ಕ್ಷೇತ್ರದ ಮಹಿಮೆ ತಿಳಿಸಿ ಆಚಾರ್ಯರ ಗ್ರಂಥಗಳು ಹಾಗೂ ಅವುಗಳ ಅಧ್ಯಯನವು ಮುಕ್ತಿಗೆ ಸೋಪಾನ ಎಂದು ಹೇಳಿದರು.

ಭಾನುವಾರ ಬೆಳಗ್ಗೆ ನಗರ ಸಂಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ. ಪ್ರವಚನ ಇತರ ಧಾಮಿರ್ಕ ಕಾರ್ಯಕ್ರಮಗಳು ನಡೆದವು.

ಪರಿಷತ್ ಅಧ್ಯಕ್ಷ ಶ್ರೀಧರ ಕುಲಕರ್ಣಿ ಮಾತನಾಡಿ, ಮಧ್ವಾಚಾರ್ಯರು ತೋರಿದ ಎರಡು ಮಾರ್ಗಗಳು ಜನಸೇವೆ ಮತ್ತು ಜನಾರ್ದನ ಸೇವೆ, ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪರಿಷತ್ ಸಂಚಾಲಕ ರಮೇಶಾಚಾರ್ಯ ಹಿಪ್ಪರಗಿ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net