ವೆಂಟಿಲೇಟರ್ ಸರಿಪಡಿಸದಿದ್ದರೆ ಕ್ರಮ : ತುರುವೇಕೆರೆ ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಸಚಿವ ಮಾಧುಸ್ವಾಮಿ ಎಚ್ಚರಿಕೆ

8tvk1
Published on

ತುರುವೇಕೆರೆ: ಕರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಒಂದು ವೆಂಟಿಲೇಟರ್ ಸರಿಯಾಗಿಲ್ಲ. ತಾಲೂಕಿನಲ್ಲಿ ಪ್ರಕರಣಗಳು ಕಂಡುಬಂದರೆ ಏನು ಮಾಡುತ್ತೀರಿ? ಕೂಡಲೇ ಅದನ್ನು ಸರಿಮಾಡಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇದು ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿದ ಎಚ್ಚರಿಕೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಮಸಾಲ ಜಯರಾಮ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು, ತಾಲೂಕಿನಲ್ಲಿ 22 ಜನರನ್ನುಹೋಂ ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರಿನಿಂದ 15,688 ಮಂದಿತಾಲೂಕಿಗೆ ಬಂದಿದ್ದಾರೆ ಎಂದು ಟಿಎಚ್‌ಒ ಡಾ.ಸುಪ್ರಿಯಾ ಸಭೆಗೆ ಮಾಹಿತಿ ನೀಡಿದರು. ತಾಲೂಕಿನಾದ್ಯಂತಪಡಿತರ ಅಕ್ಕಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಪ್ರೇಮ ಹೇಳಿದಾಗ ಮಾತನಾಡಿದ ಶಾಸಕ ಮಸಾಲ ಜಯರಾಂ, ಪಡಿತರ ವಿತರಣೆ ವೇಳೆ ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ 100 ರೂಪಾಯಿ ಲಂಚ ಕೇಳುತ್ತಿರುವ ಆರೋಪವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್, ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದರು.

ಬೇಸಿಗೆಯಲ್ಲೂ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ. ಸ್ಥಳಕ್ಕೆ ಹೋಗಿ ವಾಸ್ತವಾಂಶದ ಮಾಹಿತಿ ತನ್ನಿ ಎಂದು ತಾಪಂ ಇಒ ಜಯಕುಮಾರ್ ಹಾಗೂ ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿ ಇಂತಿಯಾಜ್ ಅಹಮದ್‌ಗೆ ತರಾಟೆತೆಗೆದುಕೊಂಡರು. ತೋಟಗಾರಿಕೆ ಇಲಾಖೆ ರೇಖಾ ಮತ್ತು ತಹಸೀಲ್ದಾರ್ ಆರ್.ನಯಿಂಉನ್ನೀಸಾ, ಎಸಿ ಕೆ.ಆರ್.ನಂದಿನಿ, ಎಸ್‌ಪಿ ಡಾ.ವಂಶಿಕೃಷ್ಣ,ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ ಇದ್ದರು.

ಖಾಸಗಿ ಆಸ್ಪತ್ರೆ ತೆರೆಯದಿದ್ದರೆ ಲೈಸನ್ಸ್ ರದ್ದು: ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳನ್ನು ತೆರೆಯದಿದ್ದರೆ ಪರವಾನಗಿ ರದ್ದುಪಡಿಸಲಾಗುವುದು. ನಂಜನಗೂಡು ಮತ್ತು ನಿಜಾಮುದ್ದಿನಂತಹ ಪ್ರಕರಣಗಳಿಂದ ಸೋಂಕಿನ ಗಂಭೀರತೆ ಹೆಚ್ಚಿದೆ. ಅಗತ್ಯ ವಸ್ತುಗಳು ಜನರಿಗೆ ಸಿಗುವಂತಾಗಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net