ಮಾಧುಸ್ವಾಮಿಯನ್ನು ಕಾಂಗ್ರೆಸ್ಸಿಗೆ ನಾನೇ ಸ್ವಾಗತಿಸುತ್ತೇನೆ: ಪರಂ

JCM_Param12
Published on

ತುಮಕೂರು: ಮಾಧುಸ್ವಾಮಿ ಅವರನ್ನು ಕಾಂಗ್ರೆಸ್ಸಿಗೆ ನಾನೇ ಸ್ವಾಗತ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಂ, ಭಾನುವಾರ ಮಾಧುಸ್ವಾಮಿ ಅವರನ್ನು ಮುದ್ದಹನುಮೇಗೌಡರು ಭೇಟಿ ಮಾಡಿದ್ದಾರೆ. ಸಂದರ್ಭ ಬಂದಾಗ ನಾವು ಭೇಟಿ ಮಾಡುತ್ತೀವಿ ಎನ್ನುವ ಮೂಲಕ ಬಿಜೆಪಿ ಬಂಡಾಯದ ಲಾಭ ಪಡೆಯುವ ತಂತ್ರಗಾರಿಕೆ ಮುಂದುವರೆಸಿದರು.

ಮುದ್ದಹನುಮೇಗೌಡರ ಸೋಲು-ಗೆಲುವಿನ ಶ್ರೇಯಸ್ಸು ಕಾಂಗ್ರೆಸ್‌ಗೆ ಸೇರಿದ್ದು. ವೈಯಕ್ತಿಕವಾಗಿ ಯಾರೂ ಇದನ್ನು ಕ್ಲೈಮ್ ಮಾಡುವುದಿಲ್ಲ ಎಂದು ಪರಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಏ.14ಕ್ಕೆ ಸಿಎಂ, ಡಿಸಿಎಂ: ಕೆ.ಬಿ.ಕ್ರಾಸ್ ಬಳಿ ಪ್ರಜಾಧ್ವನಿ - 2.0 ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿಕುಮಾರ್ ಏ.14ಕ್ಕೆ ಆಗಮಿಸಲಿದ್ದಾರೆ. ತಿಪಟೂರು, ಚಿಕ್ಕನಾಯನಕಹಳ್ಳಿ, ಗುಬ್ಬಿ, ತುರುವೇಕೆರೆ 4 ಕ್ಷೇತ್ರಗಳ ಕ್ರೇಂದವನ್ನಾಗಿಟ್ಟುಕೊಂಡು ಕೆ.ಬಿ.ಕ್ರಾಸ್‌ನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net