ಮಾಧುಸ್ವಾಮಿ ಸ್ವಕ್ಷೇತ್ರದ ಪುರಸಭೆ ಜೆಡಿಎಸ್ ಪಾಲು

03 c n halli TMC photo.1
Published on

ಚಿಕ್ಕನಾಯಕನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರವಾದ ಚಿಕ್ಕನಾಯಕನಹಳ್ಳಿ ಪುರಸಭೆ ಆಡಳಿತ ಚುಕ್ಕಾಣಿ ಜೆಡಿಎಸ್ ಪಾಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್‌ನ ಪುಷ್ಪಾ ಅಧ್ಯಕ್ಷೆಯಾಗಿ, ರೇಣುಕಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಎಸ್ಸಿ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ 4ನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯ ಕೆ.ನಾಗರಾಜು ಹಾಗೂ 22ನೇ ವಾರ್ಡ್ ಜೆಡಿಎಸ್ ಸದಸ್ಯೆ ಪುಷ್ಪಾ ನಾಮಪತ್ರ ಸಲ್ಲಿಸಿದ್ದರು. ಹಾಗೆಯೇ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 23ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಸಿ.ಉವಾ ಹಾಗೂ 18ನೇ ವಾರ್ಡ್ ಜೆಡಿಎಸ್ ಸದಸ್ಯೆ ಸಿ.ಎಂ.ರೇಣುಕಮ್ಮ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 23 ಸದಸ್ಯರು ಹಾಗೂ ಸಚಿವ, ಸಂಸದರ ಮತ ಸೇರಿ ಒಟ್ಟು 25 ಮತಗಳಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಪುಷ್ಪ ಪರವಾಗಿ 14, ಕೆ.ನಾಗರಾಜು ಪರ 11 ಸದಸ್ಯರು ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳಾದ ಸಿ.ಎಂ.ರೇಣುಕಮ್ಮ ಪರವಾಗಿ 14 ಸದಸ್ಯರು, ಸಿ.ಉವಾ ಪರವಾಗಿ 11 ಸದಸ್ಯರು ಬೆಂಬಲ ಸೂಚಿಸಿದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ತೇಜಸ್ವಿನಿ ಕಾರ್ಯನಿರ್ವಹಿಸಿದರು. ಸಂಸದ ಜಿ.ಎಸ್.ಬಸವರಾಜು, ಸದಸ್ಯರಾದ ಟಿ.ಬಿ.ತಿಪ್ಪೇಸ್ವಾಮಿ, ಮಲ್ಲೇಶಯ್ಯ, ಪೂರ್ಣಿಮಾ, ರಾಜಶೇಖರ್ ಮತ್ತಿತರರು ಇದ್ದರು.

ಸಚಿವ ಮಾಧುಸ್ವಾಮಿ ಅಭಿನಂದನೆ: ಚುನಾವಣೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ, ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಅಭಿನಂದನೆ ಸಲ್ಲಿಸಿದರು, ಅಧಿಕಾರ ಶಾಶ್ವತವಲ್ಲ. ಹೆಸರೇ ಶಾಶ್ವತ. ಆದ್ದರಿಂದ, ನಿಮ್ಮ ಹೆಸರು ಉಳಿಯುವಂತಹ ಕೆಲಸಗಳನ್ನು ವಾಡಬೇಕು. ಪಟ್ಟಣಕ್ಕೆ ಒಳಚರಂಡಿ ಮಂಜೂರಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ವಾಡಿ ಎಂದು ಕಿವಿಮಾತು ಹೇಳಿದರು.

ಪುರಸಭೆಯಲ್ಲಿ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಮೇಲುಗೈ ಸಾಧಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಹಿನ್ನಡೆಯಾಗಿದೆ. ಚುನಾವಣೆಗೆ ಮುನ್ನ ಜೆಡಿಎಸ್‌ನ 14 ಸದಸ್ಯರು ಬೆಳಗ್ಗೆ ನಿರ್ವಾಣಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ಚುನಾವಣೆ ನಂತರ ತಾತಯ್ಯನ ಸಮಾಧಿಗೆ ಪೂಜೆ ಸಲ್ಲಿಸಿದರು. ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ವಾಡುತ್ತೇನೆ, ಕಸಮುಕ್ತ ಪಟ್ಟಣವನ್ನಾಗಿಸಲು ಶ್ರಮಿಸುತ್ತೇನೆ. ಪುಷ್ಪಾ, ನೂತನ ಅಧ್ಯಕ್ಷೆ ನಮ್ಮ ನಾಯಕರಾದ ಸಿ.ಬಿ.ಸುರೇಶ್‌ಬಾಬು ಆಣತಿಯಂತೆ ನಾವು ಅಧಿಕಾರಕ್ಕೇರಿದ್ದು, ಅವರ ವಾರ್ಗದರ್ಶನದಲ್ಲಿ ಉತ್ತಮ ಆಡಳಿತ ನಿರ್ವಹಿಸುತ್ತೇವೆ. ಎಲ್ಲ ಸದಸ್ಯರ ಸಹಕಾರ ಅಗತ್ಯ. ಸಿ.ಎಂ.ರೇಣುಕಮ್ಮ ಉಪಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net