ಒಗ್ಗಟ್ಟಿನಿಂದ ಮುಂದುವರೆರಲು ಮಧುಸೂಧನ್ ಸಲಹೆ

6adarshkdga5 - Copy
Published on

ಮಡಿಕೇರಿ: ಒಕ್ಕಲಿಗ ಸಮುದಾಯವರು ಒಗ್ಗಟ್ಟಿನಿಂದ ಮುಂದುವರೆಯಬೇಕಾಗಿದೆ ಎಂದು ಅಖಿತ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯ ಅಧ್ಯಕ್ಷ ಮಧುಸೂಧನ್ ಹೇಳಿದರು.


ನಗರದ ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಕೊಡಗು ಜಿಲ್ಲಾ ಹಾಗೂ ತಾಲೂಕು ಘಟಕಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ಸಮುದಾಯವರು ಒಗ್ಗಟ್ಟಿನಿಂದ ಮುಂದುವರೆಯಬೇಕಾಗಿದೆ. ಸಂಘದ ಬೆಳವಣಿಗೆಗೆ ಸದಸ್ಯರು ದಿನದ ಕನಿಷ್ಟ ಅರ್ಧಗಂಟೆಗಳಷ್ಟು ಸಮಯವನ್ನಾದರೂ ಮೀಸಲಿಡಬೇಕು ಎಂದು ಹೇಳಿದರು.


ಒಕ್ಕೂಟದ ಖಜಾಂಚಿ ಅಮ್ಮಾಜಿರ ಪೊನ್ನಪ್ಪ ಮಾತನಾಡಿ, ಜನಾಂಗದಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸಂಘಟಿತರಾಗಬೇಕಾಗಿದೆ. ಗೌಡ ಪಂಗಡಗಳನ್ನು ಒಗ್ಗೂಡಿಸಿ ಎಲ್ಲರೂ ಒಗ್ಗಟ್ಟಿನಿಂದ ಮುಂದುವರೆಯಬೇಕು. ಮೀಸಲಾತಿ ಹೋರಾಟದ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಿಳಿಸುವಂತಾಗಬೇಕು ಎಂದರು.


ಈ ಸಂದರ್ಭ ಜಿಲ್ಲಾ ಸಮಿತಿ ರಚಿಸುವ ಕುರಿತು ಹಾಗೂ ಪುರುಷ, ಮಹಿಳಾ ಘಟಕಗಳ ರಚಿಸುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ಪೈಕೆರ ಮನೋಹರ್, ಬಾಲಾಡಿ ಮನೋಜ್, ಕಡ್ಯದ ಪಾರ್ವತಿ, ರಾಜ್ಯ ಘಟಕದ ಅನುಸೂಯ, ದೇವರಾಜು, ರಜಿತಾ ಕಾರ್ಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net