ಮಧುಸೂದನ್ ಹೆಮ್ಮನಹಳ್ಳಿ ಗ್ರಾಪಂ ಉಪಾಧ್ಯಕ್ಷ

oppo_2
ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಧುಸೂದನ್ ಚುನಾಯಿತರಾದರು. ನಾಗೇಶ್, ಉಮೇಶ್, ಶ್ಯಾಮ್ ಪ್ರಸಾದ್, ಅಂಕಪ್ಪ, ಬಾಬು, ಕೃಷ್ಣಪ್ಪ, ದಿನೇಶ್ ಕೆಂಚಪ್ಪ ಇದ್ದರು.
Published on

ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಧುಸೂದನ್ ಆಯ್ಕೆಯಾಗಿದ್ದಾರೆ.

ಅಪ್ಪಾಜಿಗೌಡ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಮಧುಸೂದನ್ ಹಾಗೂ ಸೌಭಾಗ್ಯ ನಾಮಪತ್ರಗಳನ್ನು ಸಲ್ಲಿಸಿದ್ದರು. ಒಟ್ಟು 13 ಮಂದಿ ಸದಸ್ಯ ಬಲದ ಗ್ರಾಪಂಗೆ ಚುನಾವಣೆ ನಡೆದು ಮಧುಸೂದನ್ 7 ಮತಗಳು ಹಾಗೂ ಸೌಭಾಗ್ಯ 6 ಮತಗಳು ಪಡೆದರು. ಒಂದು ಮತಗಳ ಅಂತರದಿಂದ ಮಧುಸೂದನ್ ಗೆಲುವು ಸಾಧಿಸಿದ್ದು, ಚುನಾವಣಾಧಿಕಾರಿಯಾಗಿದ್ದ ತಾಪಂ ಇಒ ರಾಮಲಿಂಗಯ್ಯ ಆಯ್ಕೆ ಘೋಷಿಸಿದರು.

ಮಧುಸೂದನ್ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಪಂನ ಸದಸ್ಯರ ಸಹಕಾರದಿಂದ ಮೂಲ ಸೌಕರ್ಯಗಳು ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಪಂ ಸದಸ್ಯರಾದ ನಾಗೇಶ್, ಉಮೇಶ್, ಶ್ಯಾಮ್ ಪ್ರಸಾದ್, ಮುಖಂಡರಾದ ಅಂಕಪ್ಪ, ಬಾಬು, ಕೃಷ್ಣಪ್ಪ, ದಿನೇಶ್ ಕೆಂಚಪ್ಪ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net