ಸನಾತನ ಧರ್ಮಸಾರ ಮುಂದಿನ ಪೀಳಿಗೆಗೆ ಹಸ್ತಾಂತರ : ಚಿನ್ಮಯ ಮಿಷನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ಶುಭನುಡಿ

New Project (8)
Published on

ಕಾಸರಗೋಡು: ಸನಾತನ ಧರ್ಮದ ಸಾರವನ್ನು ಕರಗತ ಮಾಡಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ನಡೆಸದಿದ್ದಲ್ಲಿ, ನಾವು ಮುಂದಿನ ಪೀಳಿಗೆಗೆ ಎಸಗುವ ಮಹಾ ಅಪರಾಧವಾಗಲಿದೆ ಎಂದು ಕಾಸರಗೋಡು ಚಿನ್ಮಯ ಮಿಷನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯಾ ಹೇಳಿದರು.

ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವಾಲಯಗಳ ಪಾವಿತ್ರೃ ಕಾಪಾಡುವುದರ ಜತೆಗೆ ತಮ್ಮ ಮನಸ್ಸಿನ ಕೊಳೆ ಶುದ್ಧಿಗೊಳಿಸಬೇಕು. ಇಂದು ಮಧೂರು ಕ್ಷೇತ್ರ ಜಗತ್ತಿಗೆ ಧಾರ್ಮಿಕ ಸಂದೇಶ ಸಾರುವ ಶ್ರದ್ಧಾಕೇಂದ್ರವಾಗಿ ಬೆಳೆದು ನಿಂತಿದ್ದು, ಇದರ ಹಿಂದೆ ಸಾವಿರಾರು ಮಂದಿ ಕಾರ್ಯಕರ್ತರ ಪರಿಶ್ರಮ ಅಡಕವಾಗಿದೆ ಎಂದರು.

ಇರಾಬಾಳಿಕೆ ಸತೀಶ್ ಕುಮಾರ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾಂಕ್ ನಿರ್ದೇಶಕ ಜಸ್ಟಿಸ್ ಚಂದ್ರಶೇಖರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಟ್ಲ ಬದಿಮನೆ ಪದ್ಮನಯನಾ ಸುಂದರ್‌ನಾಯ್ಕ, ರಾಧಾಕೃಷ್ಣ ನಾಯ್ಕ ವಿಟ್ಲ, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ರಾಜಕೀಯ ಮುಖಂಡ ಎಂ.ಬಿ.ಸದಾಶಿವ, ಪ್ರಗತಿಪರ ಕೃಷಿಕ ಮಾರಪ್ಪ ಶೆಟ್ಟಿ ಪುಣಚ, ಹೋಟೆಲ್ ಉದ್ಯಮಿ ಕೃಷ್ಣ ಶೆಟ್ಟಿ ಮುಂಬೈ, ಉಮಾ ಶೆಟ್ಟಿ ಮುಂಬೈ, ಎಸ್.ಬಿ ಜಯರಾಮ ರೈ ಬಳಂಜ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟಿ ಹರಿಣಿ ಸದಾಶಿವ ಉಪಸ್ಥಿತರಿದ್ದರು. ಡಾ.ರವಿಪ್ರಸಾದ್ ಬೆಳ್ಳೂರು ಸ್ವಾಗತಿಸಿದರು.

ರಾಜೇಶ್ ಮಾಸ್ಟರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಮಧೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net