ಮಧುರಕಾವ್ಯ ಚಿತ್ರ ಬಿಡುಗಡೆ 21ರಂದು

IMG_20230713_164154_992.jpg
Published on

ಹುಬ್ಬಳ್ಳಿ: ಆಯುರ್ವೇದ ಹಾಗೂ ಆಲೋಪಥಿ ವೈದ್ಯ ಪದ್ಧತಿಯ ಮಧ್ಯೆ ನಡೆಯುವ ರ್ಷಣೆಯ ಕಥಾ ವಸ್ತುವನ್ನು ಇಟ್ಟುಕೊಂಡು ನಿಮಿರ್ಸಲಾಗಿರುವ "ಮಧುರಕಾವ್ಯ' ಕನ್ನಡ ಚಲನಚಿತ್ರ ಜು. 21ರಂದು ರಾಜ್ಯಾದ್ಯಂತ 70ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ಹಾಗೂ ನಿರ್ದೇಶಕ ಮಧುಸೂದನ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ವೃತ್ತಿಯಿಂದ ಆಯುರ್ವೇದ ವೈದ್ಯನಾಗಿರುವ ನನಗೆ ಭಾರತೀಯ ವೈದ್ಯಕಿಯ ಪದ್ಧತಿಯಾದ ಆಯುರ್ವೇದದ ಮಹತ್ವ ಸಾರುವ ಚಿತ್ರ ಮಾಡುವ ಆಶಯ ಇತ್ತು. ಅದು ಈಗ ಕೈಗೂಡಿದೆ ಎಂದರು.

ನಿತ್ಯ ನೂರಾರು ಜನರಿಗೆ ಪಾರಂಪರಿಕ ಪದ್ಧತಿಯ ಆಯುರ್ವೇದ ಔಷಧ ನೀಡುತ್ತೇನೆ. ಇದುವರೆಗೂ 10 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಔಷಧ ನೀಡಿದ್ದು, ಹೆಚ್ಚಿನವರು ಗುಣಮುಖರಾಗಿದ್ದಾರೆ ಎಂದರು.

ಆಲೋಪಥಿ ಔಷಧಿಯ ಅಬ್ಬರದ ಮಧ್ಯೆ ಆಯುರ್ವೇದ ಕಣ್ಮರೆಯಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಚಿತ್ರ ತಂಡ ಹೊಂದಿದೆ. ಕಮಷಿರ್ಯಲ್ ಚಿತ್ರಕ್ಕೆ ಬೇಕಾದಂತೆ ಹಾಡು, ಸಂಗೀತ ಎಲ್ಲವನ್ನೂ ಅಳವಡಿಸಲಾಗಿದೆ. ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಿದ್ದೇವೆ. ಕನ್ನಡಿಗರು ಬೆಂಬಲಿಸಬೇಕು ಎಂದರು.

ಖಳನಾಯಕನಾಗಿ ರಾಜಕುಮಾರ ನಾವಿಕ ನಟಿಸಿದ್ದು, ಸತೀಶ್ ಮೌರ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಟ್ರೇಲರ್ ಅನ್ನು ನಟ ದೇವರಾಜ್ ಅವರು ಈಚೆಗೆ ಬಿಡುಗಡೆ ಮಾಡಿದ್ದು, ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಧುಸೂದನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net