ಮಧುರಚೆನ್ನರ ಜೀವನವೇ ಅಧ್ಯಾತ್ಮವಾಗಿತ್ತು

Madhurachenna's life was spiritual.
ವಿಜಯಪುರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅನುಭಾವಿಗಳು ಮರುಭೆಟ್ಟಿ (6) ಹಾಗೂ ನನ್ನ ನಲ್ಲ ಅನುವಾದಿತ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಚಿಂತಕ ಜಗದೀಶ ಗಲಗಲಿ ಮಾತನಾಡಿದರು.
Published on

ವಿಜಯಪುರ : ಲೌಕಿಕ ಮತ್ತು ಪಾರಮಾರ್ಥವನ್ನು ಸಮಾನವಾಗಿ ಸ್ವೀಕರಿಸಿದವರು ಮಧುರಚೆನ್ನರು. ತತ್ವಜ್ಞಾನಿ ಅರವಿಂದರ ಪ್ರಭಾವಕ್ಕೊಳಗಾಗಿ ಅನುಭಾವಿ ಕವಿಗಳಾದರು. ಮಧುರಚೆನ್ನರ ಜೀವನವೇ ಅಧ್ಯಾತ್ಮವಾಗಿದ್ದು, ಅಧ್ಯಾತ್ಮವೇ ಅವರ ಜೀವನವಾಗಿತ್ತು ಎಂದು ಚಿಂತಕ ಜಗದೀಶ ಗಲಗಲಿ ಹೇಳಿದರು.

ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಚಿಂತನ ಸಾಂಸತಿಕ ಬಳಗದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅನುಭಾವಿಗಳು ಮರುಭೆಟ್ಟಿ (6) ಹಾಗೂ ನನ್ನ ನಲ್ಲ ಅನುವಾದಿತ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿ.ಕೆ. ಗೋಕಾಕ, ರಂ.ಶ್ರೀ. ಮುಗಳಿ, ದ.ರಾ. ಬೇಂದ್ರೆ, ಬಿ.ಎಂ.ಶ್ರೀಯರಂಥ ಸಾಹಿತ್ಯ ದಿಗ್ಗಜರ ಮೆಚ್ಚುಗೆಗೆ ಪಾತ್ರರಾದ ಮಧುರಚೆನ್ನರು ಅನುಭಾವದ ಮೂಲಕ ಕಾವ್ಯದ ರಚನೆ ಮಾಡಿದರು. 1922ರಲ್ಲಿ ಆರಂಭಗೊಂಡ ಹಲಸಂಗಿ ಗೆಳೆಯರ ಬಳಗ ಇಂದಿಗೂ ಸಾಹಿತ್ಯಿಕ, ಆಧ್ಯಾತ್ಮಿಕ, ಸಾಂಸತಿಕ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಹಿರಿಯ ಶಿಕ್ಷಣ ತ ಪ್ರೊ. ಎನ್​.ಜಿ. ಕರೂರ ಅನುವಾದಿತ ಗ್ರಂಥದ ಅವಲೋಕನದ ಮಾತನಾಡಿ, ಮಧುರಚೆನ್ನರ ಒಡನಾಟದ ಅನುಭವಗಳನ್ನು ಹಂಚಿಕೊಂಡರು.

ಅತಿಥಿ ಡಾ. ಆರ್​.ಕೆ. ಕುಲಕರ್ಣಿ ಮಾತನಾಡಿ, ಸಣ್ಣ ಹಳ್ಳಿಯಲ್ಲಿ ಜನಿಸಿದ ಮಧುರಚೆನ್ನರು 22 ಭಾಷೆಯನ್ನು ಬಲ್ಲ ಪರಿಣಿತರಾಗಿದ್ದರು. ಕವಿ, ಚಿಂತಕ, ಕಾರಣೀಪುರುಷ, ಭೂತಿ ಪುರುಷ ಮಧುರಚೆನ್ನರು ಬೆಳಗು, ಆತ್ಮಶೋಧ, ಪೂರ್ವರಂಗ, ಕಾಳರಾತ್ರಿಯಂತಹ ಶ್ರೇಷ್ಠ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಎಂದರು.

ಬಿ.ಆರ್​. ಬನಸೋಡೆ ಪ್ರಾರ್ಥಿಸಿದರು. ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಡಾ. ಎಂ.ಎಸ್​. ಮದಭಾವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಡಾ. ಮಾಧವ ಗುಡಿ ವಂದಿಸಿದರು.

ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಡಾ. ಆರ್​.ಬಿ. ಕೊಟ್ನಾಳ, ಆರ್​.ಎಸ್​. ಭೋವಿ, ಸಂಗಮೇಶ ಬದಾಮಿ, ವಿ.ಸಿ. ನಾಗಠಾಣ, ಡಾ. ಜಿ.ಡಿ. ಗೋಟ್ಯಾಳ, ಗಂಗಾಧರ ಸಾಲಕ್ಕಿ, ಡಾ. ವಿ.ಎಸ್​. ಬಾಗಾಯತ್​, ಮ.ಗು. ಯಾದವಾಡ, ವಿದ್ಯಾವತಿ ಅಂಕಲಗಿ, ಜಂಬುನಾಥ ಕಂಚ್ಯಾಣಿ, ದಾಾಯಣಿ ಬಿರಾದಾರ, ವಿದ್ಯಾವತಿ ಅಂಕಲಗಿ, ನೂತನ ಬ್ಯಾಕೋಡ, ಶಶಿಧರ ಶಿರಹಟ್ಟಿ, ವಿಠಲ ತೇಲಿ, ವಿದ್ಯಾಧರ ಸಾಲಿ, ಪಿ.ಎಸ್​. ಕಡೇಮನಿ, ದೊಡ್ಡಣ್ಣ ಬಜಂತ್ರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net