ರಾಜವಂಶಸ್ಥರ ಕೊಡುಗೆ ಅವಿಸ್ಮರಣೀಯ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಣ್ಣನೆ

03_10_Mdy_04(Lions)
Published on

ಮಂಡ್ಯ: ಕಾವೇರಿ ಕಣಿವೆ ಭಾಗಕ್ಕೆ ಮೈಸೂರು ರಾಜಮನೆತನದ ತ್ಯಾಗ-ಕೊಡುಗೆ ಅವಿಸ್ಮರಣೀಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ವೈದ್ಯರು, ಅಭಿಯಂತರರು, ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಳೇ ಮೈಸೂರು ಪ್ರಾಂತ್ಯದ ಜನತೆ ನೆಮ್ಮದಿಯಾಗಿರಲು ಮೈಸೂರು ರಾಜವಂಶಸ್ತರ ಅಪಾರ ಕೊಡುಗೆ ನೀಡಿದ್ದಾರೆ. ಅಕ್ಷರ ಮತ್ತು ಆರೋಗ್ಯ ಇಂದಿನ ಜನತೆಗೆ ಅತ್ಯಾವಶ್ಯಕ. ಯಾವುದೇ ದೇಶವಾದರೂ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಉತ್ತಮ ಕಲ್ಪಿಸಿದರೆ ಸರ್ಕಾರ ಸೌಖ್ಯವಾಗಿರುತ್ತದೆ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ತಾಗರಾಜು, ಕೆ.ಎಲ್.ರಾಜಶೇಖರ್, ಆನಂದ್, ಜನಾರ್ದನ ಕೊಂಡ್ಲಿ, ಡಾ.ಗೋಪಾಲಕೃಷ್ಣ ಗುಪ್ತ, ಜಗದೀಶ್, ಡಾ.ಎನ್.ಕೃಷ್ಣೇಗೌಡ, ಜಯರಾಮಯ್ಯ, ಸಿದ್ದರಾಮೇಗೌಡ, ದೇವೇಗೌಡ, ಸುರೇಶ್ ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net