ಮೈಸೂರು: ಸ್ಕಾಲರ್ಸ್ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್‌ನಿಂದ ಜು.7ರ ಸಂಜೆ 5ಕ್ಕೆ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಗಾಯಕ ಆರ್.ಕೃಷ್ಣಮೂರ್ತಿ ಸಾರಥ್ಯದಲ್ಲಿ ಮಧುರ ಗಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರೂ ಆದ ನಿವೃತ್ತ ಡಿಡಿಪಿಐ ನಾಗಮಲ್ಲೇಶ್ ತಿಳಿಸಿದರು.
ಅಂದು ಸಂಜೆ ಕನ್ನಡ ಮತ್ತು ಹಿಂದಿ ಭಾಷೆಯ 35 ಗೀತೆಗಳನ್ನು ಹಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟ್ರಸ್ಟ್‌ನ ಟಿ.ಆರ್.ಸಿದ್ದರಾಜು, ಎಂ.ಸುರೇಶ್, ನಾರಾಯಣಸ್ವಾಮಿ, ಶಿವಕುಮಾರ್, ಮುರಳಿ, ಎ.ನಾಗರಾಜು, ತೇಜಸ್ವಿನಿ ಅನಂತರಾಮನ್, ಸರೋಜಾ, ಅಪೂರ್ವ, ಮಂಜುಳಾ, ಕೆ.ಲಕ್ಷ್ಮೀಹೇಮಂತ್, ಎಂ.ಆರ್.ಆಶಾ ಗಾಯನದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಹೇಳಿದರು.