ಕೋಟೂರು ಪ್ರಾದೇಶಿಕ ಸಮಿತಿ ರಚನೆ: ಮಧೂರು ಬ್ರಹ್ಮಕಲಶ ಹಿನ್ನೆಲೆ

mahostava
Published on

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ನಿಮಿತ್ತ ಕೋಟೂರು ಕಾರ್ತಿಕೇಯ ಭಜನಾ ಮಂದಿರದಲ್ಲಿ ಭಾನುವಾರ ಕೋಟೂರು ಪ್ರಾದೇಶಿಕ ಸಮಿತಿ ರಚಿಸಲಾಯಿತು.

ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಮಿತಿಯ ಕಾರ್ಯಕಾರಿ ಸಮಿತಿ ರಚಿಸಲಾಯಿತು. ನರಸಿಂಹ ಭಟ್ ಪಾತನಡ್ಕ(ಅಧ್ಯಕ್ಷ), ಪ್ರಕಾಶ ಕೋಟೂರು(ಕಾರ್ಯದರ್ಶಿ), ಸುಬ್ರಹ್ಮಣ್ಯ ಭಟ್ ಅಡ್ಕ(ಕೋಶಾಧಿಕಾರಿ) ಆಯ್ಕೆಯಾದರು. ನಿವೇದನಾಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಗೆ ಹಸ್ತಾಂತರಿಸಲಾಯಿತು.

ಮುಳಿಯಾರು ಪಂಚಾಯಿತಿ ಸಮಿತಿ ಸದಸ್ಯ ಮುರಳೀಕೃಷ್ಣ ಸ್ಕಂದ, ಗೋಪಾಲನ್ ಕೋಟೂರು ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ಕೋಟೂರು ವಂದಿಸಿದರು. 2025 ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net