

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ನಿಮಿತ್ತ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿಯ ವಿಸ್ತರೀಕರಣ ಸಭೆ ಅಮ್ಮಂಗೋಡು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಭಾನುವಾರ ಜರುಗಿತು.
ಸದಾಶಿವ ಭಟ್ ಮುಂಡಪ್ಪಳ್ಳ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಮಾತುಗಳನ್ನಾಡಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಮುಂದಿನ ಕಾರ್ಯ ಯೋಜನೆ, ಮನೆ-ಮನೆ ಅಭಿಯಾನ, ಕರಸೇವೆ, ಸ್ವಯಂಸೇವಕರ ಕಾರ್ಯವಿಧಾನ , ಹೊರೆಕಾಣಿಕೆ ಮೊದಲಾದ ವಿಷಯ ಬಗ್ಗೆ ಮಾಹಿತಿ ನೀಡಿದರು. ಪ್ರಕಾಶ ಅಮ್ಮಂಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಯೋಜಿಸಿದರು. ಕಾರ್ಯದರ್ಶಿ ಪುರುಷೋತ್ತಮ ಗೋಳಿಯಡ್ಕ ಸ್ವಾಗತಿಸಿ, ಪ್ರಿಯಾ ಗೋಳಿಯಡ್ಕ ವಂದಿಸಿದರು.