

ಮಧೂರು: ಭಾರತಕ್ಕೆ ಧರ್ಮವೇ ಆರಾಧನೆ. ಸಾವಿರ ವರ್ಷಗಳ ನಿರಂತರ ಆಕ್ರಮಣ ನಂತರವೂ ಭಾರತ ಭಾರತವಾಗಿರಲು ಕಾರಣ ಇಲ್ಲಿಯ ಧರ್ಮ. ಇಲ್ಲಿ ಧರ್ಮ ಮತ್ತು ರಾಷ್ಟ್ರ ಒಂದೇ ಆಗಿರುವುದೇ ಇದಕ್ಕೆ ಕಾರಣ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ಅಂಗವಾಗಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಜಿ ಸಚಿವ ಪ್ರಮೋದ್ ಮಧ್ವ್ವರಾಜ್ ಉಪಸ್ಥಿತರಿದ್ದರು.
ಶ್ರೀಕ್ಷೇತ್ರದ ತಂತ್ರಿ ಡಾ.ಶಿವಪ್ರಸಾದ್ ತಂತ್ರಿ ದೇರೇಬೈಲು, ವಿಹಿಂಪ ಕೇರಳ ರಾಜ್ಯ ಕಾರ್ಯದರ್ಶಿ ವಿ.ಆರ್.ರಾಜಶೇಖರನ್ ಮಾತನಾಡಿದರು. ಗ್ರೀನ್ ಹೀರೊ ಆಫ್ ಇಂಡಿಯಾ ಖ್ಯಾತಿಯ ಆರ್.ಕೆ.ನಾಯರ್ ಗುಜರಾತ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಧೂರು ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಮುಂಬಯಿ ರಿಲಯನ್ಸ್ ಇಂಡಿಯಾದ ದಯಾಸಾಗರ ಚೌಟ, ವೈಷ್ಣವಿ ಶಿವಪ್ರಸಾದ ತಂತ್ರಿ ದೇರೇಬೈಲು, ಇಚ್ಲಂಪಾಡಿ ಲಕ್ಷ್ಮಣ ಪೆರಿಯಡ್ಕ, ಸಮಾಜ ಸೇವಕ ಜಯಕುಮಾರ್, ಆರ್ಟ್ ಆಫ್ ಲಿವಿಂಗ್‌ನ ಐ.ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಉಪಸ್ಥಿತರಿದ್ದರು.
ವೈದಿಕ ಸಮಿತಿ ಅಧ್ಯಕ್ಷ ಕೆ.ವಿಷ್ಣು ಭಟ್ ಕಕ್ಕೆಪ್ಪಾಡಿ ಸ್ವಾಗತಿಸಿದರು. ಉಪೇಂದ್ರ ಕೋಟೆಕಣಿ ವಂದಿಸಿದರು. ಸಂದೇಶ್ ನಾಯ್ಕ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ತಂದೆ-ಮಗ ಒಂದೆಡೆ ಸೇರಿ ಆರಾಧಿಸಲ್ಪಡುವ ಮಧೂರು ಶ್ರೀಕ್ಷೇತ್ರ ವಿಶಿಷ್ಟ ಕೇಂದ್ರ. ಭಗವದ್ಬಕ್ತರೆಲ್ಲರ ಸಹಕಾರದೊಂದಿಗೆ ಈ ಕ್ಷೇತ್ರ ಜೀರ್ಣೋದ್ಧಾರಗೊಂಡಿದೆ. ಎಲ್ಲ ಶಕ್ತಿಗಳೂ ಇದೀಗ ಮತ್ತೆ ಸಶಕ್ತಗೊಂಡು ಭಜಕರ ಆಶೋತ್ತರ ಪೂರೈಸಲು ಬ್ರಹ್ಮಕಲಶೋತ್ಸವದ ಮೂಲಕ ಸನ್ನದ್ಧಗೊಂಡಿದೆ. ಇಲ್ಲಿ ನಡೆಸಿದ ವಿಧಿವಿಧಾನಗಳಿಂದ ಜೀವಕಳೆ ಮತ್ತೆ ಜ್ವಾಜ್ವಲ್ಯಮಾನವಾಗಿದೆ. ಡಾ.ಶಿವಪ್ರಸಾದ್ ತಂತ್ರಿ ದೇರೇಬೈಲು, ಶ್ರೀಕ್ಷೇತ್ರದ ತಂತ್ರಿ https://www.vijayavani.net/ifthar https://www.vijayavani.net/kepu-school