ಮಧುಗೌಡ ಚಿಕ್ಕಮೇದೂರು ಗ್ರಾಪಂ ಅಧ್ಯಕ್ಷ

4blrp4
ಬೇಲೂರು ತಾಲೂಕಿನ ಚಿಕ್ಕಮೇದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮಧುಗೌಡ ಅವರನ್ನು ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು. ಸೌಮ್ಯಾ, ಸಂತೋಷ್, ನಿಶಾಂತ್ ಇತರರಿದ್ದರು.
Published on

ಬೇಲೂರು : ಚಿಕ್ಕಮೇದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ 5 ಮತಗಳ ಅಂತರದಿಂದ ಎಸ್.ಬೊಮ್ಮಡಿಹಳ್ಳಿ ಗ್ರಾಮದ ಮಧುಗೌಡ ಆಯ್ಕೆಯಾದರು.

ಶಾಂತೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಸಾಮಾನ್ಯ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಎಸ್.ಬೊಮ್ಮಡಿಹಳ್ಳಿ ಗ್ರಾಮದ ಮಧುಗೌಡ ಹಾಗೂ ಗೊಟ್ರುವಳ್ಳಿಯ ಕಲ್ಯಾಣ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಇಬ್ಬರಲ್ಲಿ ಯಾರೋಬ್ಬರು ನಾಮಪತ್ರ ವಾಪಸ್ ಪಡೆಯದ ಕಾರಣ ಚುನಾವಣೆ ನಡೆಯಿತು. ಮಧುಗೌಡ 9, ಕಲ್ಯಾಣ್ ಕುಮಾರ್ 4 ಮತಗಳನ್ನು ಪಡೆದಿದ್ದರಿಂದ, ಮಧುಗೌಡ ಚಿಕ್ಕಮೇದೂರು ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಘೋಷಿಸಿದರು.

ಮಧುಗೌಡ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಬಾರಿಗೆ ಅದ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೂ, ಸಹಕಾರ ನೀಡಿದ ಮುಖಂಡರಿಗೆ ವಂದಿಸುವೆ. ಅಧ್ಯಕ್ಷನಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಿಸಲಾಗುವುದು ಎಂದರು.

ಚಿಕ್ಕಮೇದೂರು ಗ್ರಾಪಂ ಉಪಾದ್ಯಕ್ಷೆ ಸೌಮ್ಯಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ನಿಶಾಂತ್ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net