ಮೂಲಸೌಕರ್ಯ, ಅಂತರ್ಜಲವೃದ್ಧಿಗೆ ಆದ್ಯತೆ

16 Madhu 1
Published on

ಮಧುಗಿರಿ: 15ನೇ ಹಣಕಾಸು ಯೋಜನೆಯಲ್ಲಿ ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ 2 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ಮಂಗಳವಾರ ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾವಾನ್ಯ ಸಭೆಯಲ್ಲಿ ತೀರ್ವಾನಿಸಲಾಯಿತು.

2020-21ನೇ ಸಾಲಿನ ಯೋಜನೆಯಲ್ಲಿ ಎಸ್ಸಿ, ಎಸ್ಟಿಗೆ ಶೇ.25, ಅಂಗವಿಕಲರಿಗೆ ಶೇ.5 ಮತ್ತು ಕ್ರೀಡೆಗೆ ಶೇ.2 ಹೊರತುಪಡಿಸಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಮೂಲಸೌಕರ್ಯ, ಜಾನುವಾರು ತೊಟ್ಟಿಗಳು, ಚೆಕ್ ಡ್ಯಾಂ ಕೆಲಸಗಳಿಗೆ ಆದ್ಯತೆ ಮೇರೆಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧ್ಯಕ್ಷೆ ಸೂಚಿಸಿದರು.

ಯಾವುದೇ ಕೆಲಸ ವಾಡಬೇಕಾದರೂ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ 50 ಸಾವಿರ ರೂ. 50 ಮೂಟೆ ಸಿಮೆಂಟ್ ಮತ್ತು ಶೇ.2 ಕಮೀಷನ್ ಕೊಟ್ಟರೆ ವಾತ್ರ ಕೆಲಸ ಆರಂಭಿಸುವುದು ಎಂದು ಸದಸ್ಯ ರಾಮಣ್ಣ ಆರೋಪಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ, ಕೆಆರ್‌ಐಡಿಎಲ್‌ನಿಂದ ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಇಒ ದೊಡ್ಡಸಿದ್ದಯ್ಯ ಅವರಿಗೆ ಸೂಚಿಸಿದರು.

ವಾಗ್ವಾದ: ಪಶು ಇಲಾಖೆ ಇಲಾಖೆಯ ಸವಲತ್ತುಗಳನ್ನು ತಾಪಂ ಗಮನಕ್ಕೆ ತಾರದೇ ವಿತರಿಸಿರುವುದರ ಬಗ್ಗೆ ಚರ್ಚೆ ನಡೆಯಿತು, ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ನೀವೇನು ಅಧಿಕಾರಿಯೋ, ರಾಜಕಾರಣಿಯೋ ಎಂದು ಕಿಡಿಕಾರಿದರು. ಸದಸ್ಯರಾದ ರಂಗನಾಥ, ವೆಂಕಟೇಶ್, ಪ್ರಸನ್ನಕುವಾರ್ ಆರೋಪಗಳ ಸುರಿಮಳೆಗೈದರು. ಉಪಾಧ್ಯಕ್ಷ ಲಕ್ಷ್ಮೀನರಸಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ರಾಜು, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಕರೊನಾ ಭಯವಿಲ್ಲ: ತಾಲೂಕಿನಲ್ಲಿ ಈವರೆಗೂ 2ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ತಿಪ್ಪಾಪುರ ತಾಂಡಾದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ, ಸೋಂಕು ದೃಢಪಟ್ಟ ಕೆ.ಸಿ.ರೊಪ್ಪದ ವ್ಯಕ್ತಿ ಅಲೀಪುರ ಮತ್ತು ಅಗಳಿಗೆ ಹೋಗಿ ಬಂದಿರುವ ವಾಹಿತಿ ಇದ್ದು, ಈತನೊಂದಿಗೆ ಸಂಪರ್ಕದಲ್ಲಿದ್ದ 30 ಮಂದಿಯನ್ನು ಕ್ವಾರಂಟೈನ್ ವಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.

99 ಗ್ರಾಮಗಳಲ್ಲಿ ನೀರಿನ ಸಮಸ್ಯೆ : ತಾಲೂಕಿನಲ್ಲಿ 99 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು 58 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ, 15 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಜಿ.ಡಿ.ವೆಂಕಟೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net