ನರೇಗಾದಲ್ಲಿ ಏಕಶಿಲಾ ನಗರಿ ಕ್ರಾಂತಿ ; ತುಮಕೂರು ಜಿಲ್ಲೆಯಲ್ಲಿ ಮಧುಗಿರಿಗೆ ಮೊದಲ ಸ್ಥಾನ

02 MDG 01 Photo
Published on

ಮಧುಗಿರಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ 3ನೇ ಸ್ಥಾನ, ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಪುರಸಭೆ 4ನೇ ಸ್ಥಾನ ಪಡೆದ ನಂತರ ಈಗ ತಾಲೂಕು ಪಂಚಾಯಿತಿಯೂ ಅದೇ ಹಾದಿಯಲ್ಲಿ ಸಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ತಾಲೂಕು ಮೊದಲ ಸ್ಥಾನ ಮುಡಿಗೇರಿಸಿಕೊಂಡಿದೆ.

ತಾಲೂಕಿನ ಒಟ್ಟು ಗ್ರಾಮ 39 ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಷದಲ್ಲಿ ಒಟ್ಟು 7,22,112 ವಾನವ ದಿನಗಳನ್ನು ಸೃಜಿಸಲಾಗಿದ್ದು, 1221 ಕೃಷಿ ಹೊಂಡ, 1600 ಬದುಗಳ ನಿರ್ವಾಣ, 450 ದನದ ಕೊಟ್ಟಿಗೆ, 8 ಕಲ್ಯಾಣಿಗಳ ಅಭಿವೃದ್ಧಿ, 30 ಬಚ್ಚಲು ಗುಂಡಿಗಳ ನಿರ್ವಾಣ ಮತ್ತು 35 ಸಾವಿರ ಸಸಿಗಳನ್ನು ನೆಡಲಾಗಿದೆ.

ಈ ಯೋಜನೆಯಲ್ಲಿ 50,805 ಕುಟುಂಬಗಳು ನೋಂದಣಿ ವಾಡಿಸಿಕೊಂಡಿದ್ದು, ಫಲಾನುಭವಿಗೆ ದಿನಕ್ಕೆ 275 ರೂಪಾಯಿ ಕೂಲಿ ದೊರೆಯುತ್ತದೆ. 100 ದಿನಕ್ಕೆ ಒಟ್ಟು 27,500 ರೂಪಾಯಿ ಕೂಲಿ ದೊರೆಯಲಿದೆ. ಮಹಿಳೆ ಮತ್ತು ಪುರುಷರಿಗೆ ಸವಾನ ವೇತನ ಸಿಗಲಿದ್ದು, ಈ ಯೋಜನೆಯಲ್ಲಿ ಒಟ್ಟು 19,85,80,800 ರೂಪಾಯಿಯನ್ನು ಫಲಾನುಭವಿಗಳಿಗೆ ಕೂಲಿ ನೀಡಿದ್ದು, ಕೂಲಿಯ ಬಾಬ್ತು ನೇರವಾಗಿ ಫಲಾನುಭವಿಗಳ ಖಾತೆಗೆ ಜವಾ ಆಗಲಿದೆ.

ಸಂಕಷ್ಟದಲ್ಲಿ ಕೈಹಿಡಿದ ಯೋಜನೆ: ಕರೊನಾ ಸಂಕಷ್ಟದಿಂದಾಗಿ ಪಟ್ಟಣ ತೊರೆದು ಹಳ್ಳಿ ಸೇರಿಕೊಂಡ ನಿರುದ್ಯೋಗಿಗಳಿಗೆ ಯೋಜನೆ ವರದಾನವಾಗಿ ಪರಿಣಮಿಸಿದ್ದು, ಬಹುತೇಕ ಬಡ ಜನತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಮತ್ತೆ ಗುಳೆ ಹೋಗುವುದನ್ನು ತಪ್ಪಿಸಲು ವಾನವ ದಿನಗಳನ್ನು ಹೆಚ್ಚು ವಾಡಿದ್ದಲ್ಲದೇ ಜಾಬ್‌ಕಾರ್ಡ್ಗಳನ್ನು ಹೆಚ್ಚಿಸಿದ ಪರಿಣಾಮ ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಅಭಿನಂದನಾ ಪತ್ರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.100 ಸಾಧನೆ ವಾಡಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತರು ತಾಪಂ ಇಒ ದೊಡ್ಡಸಿದ್ದಪ್ಪಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನಾ ಪತ್ರ ನೀಡಿದ್ದು, ಮುಂದೆಯೂ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಿರಿಯ ಅಧಿಕಾರಿಗಳು, ತಾಲೂಕಿನ ಜನಪ್ರತಿನಿಧಿಗಳು, ಪಿಡಿಒಗಳ ಶ್ರಮ ಹಾಗೂ ವಿಶೇಷವಾಗಿ ನರೇಗಾ ಸಹಾಯಕ ನಿರ್ದೇಶಕ ಲಕ್ಷಣ್ ಅವರ ಸಹಕಾರದಿಂದ ನರೇಗಾದಲ್ಲಿ ಮಧುಗಿರಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಜಾಬ್‌ಕಾರ್ಡ್ ಹೊಂದಿರುವ ಗ್ರಾಮೀಣ ಭಾಗದ ಜನತೆಗೆ ಈ ಯೋಜನೆಯಿಂದ ಬಹಳಷ್ಟು ಅನುಕೂಲವಾಗಲಿದೆ. ದೊಡ್ಡಸಿದ್ದಪ್ಪ ತಾಪಂ ಇಒ ಮಧುಗಿರಿ. ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಬಿಟ್ಟು ಹಳ್ಳಿ ಸೇರಿದ್ದ ಮಕ್ಕಳಿಗೆ ಯೋಜನೆಯಲ್ಲಿ ಉದ್ಯೋಗ ದೊರೆತಿದ್ದು, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ರೈತರ ಸ್ವಂತ ಜಮೀನುಗಳಲ್ಲೂ ಬದುಗಳ ನಿರ್ವಾಣ, ಇಂಗು ಗುಂಡಿಗಳಂತಹ ಕೆಲಸ ನಿರ್ವಹಿಸಲು ಸಾಧ್ಯವಿದ್ದು, ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಮಳೆ ನೀರನ್ನು ಜಮೀನುಗಳಲ್ಲೇ ಇಂಗಿಸಲು ಸಾಧ್ಯವಾಗಿದೆ. ಮಲ್ಲಮ್ಮ ಹೊಸಕೆರೆ, ಫಲಾನುಭವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net