

ಮಧುಗಿರಿ: ತಾಲೂಕಿನಲ್ಲಿ ಬಹಳಷ್ಟು ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕರ ನೆನಪಿನಲ್ಲಿ ಉಳಿದಿದ್ದು, ಈಗ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಸರ್ದಾರ್ ಸಹ ಅಂತವರ ಸಾಲಿಗೆ ಸೇರಿದ್ದಾರೆ.
ಈ ಹಿಂದೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅವೈಜ್ಞಾನಿಕತೆಯಿಂದ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಅಧಿಕಾರ ವಹಿಸಿಕೊಂಡ 9 ತಿಂಗಳಲ್ಲಿ ಸ್ವಂತ ಖರ್ಚಿನಲ್ಲಿ ಪಟ್ಟಣದ ಎಲ್ಲ ವೃತ್ತಗಳಿಗೂ ಹೈಟೆಕ್ ಸ್ಪರ್ಶ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎಲ್ಲೆಲ್ಲಿ ವೃತ್ತಗಳ ನಿರ್ಮಾಣ: ಮೊದಲಿಗೆ ಪಟ್ಟಣದ ಪಾವಗಡ ಗೇಟ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಅಂಬೇಡ್ಕರ್ ವೃತ್ತ, ಶಿರಾ ಗೇಟ್‌ನಲ್ಲಿ ರಾಜಾ ಚಿಕ್ಕಪ್ಪಗೌಡ ವೃತ್ತ, ತುಮಕೂರು ಗೇಟ್ ಬಳಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವೃತ್ತ, ಗೌರಿಬಿದನೂರು ಗೇಟ್ ಬಳಿ ಇರುವ ಟಿವಿವಿ ಕಾಲೇಜು ವೃತ್ತ, ಈಗ ನೃಪತುಂಗ ವೃತ್ತದಲ್ಲಿ ನವೀನ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.
ಅವೈಜ್ಞಾನಿಕ ತಿರುವುಗಳಿಂದ ಬಹಳಷ್ಟು ಅಪಘಾತಗಳು ಸಂಭವಿಸುತ್ತಿರುವುದನ್ನು ಮನಗಂಡು ಪಟ್ಟಣದ ಎಲ್ಲ ಪ್ರಮುಖ ವೃತ್ತಗಳಲ್ಲಿ ಸ್ವಂತ ಖರ್ಚಿನಲ್ಲಿ ಹೈಟೆಕ್ ವೃತ್ತಗಳಿಗೆ ಚಾಲನೆ ನೀಡಲಾಗಿದೆೆೆ. ಒಂದು ವೃತ್ತ ವೈಜ್ಞಾನಿಕವಾಗಿದ್ದಲ್ಲಿ 4 ಪೊಲೀಸರ ಕೆಲಸ ಮಾಡುತ್ತದೆ. ಸಾರ್ವಜನಿಕರು ಸಹಕರಿಸಿದಲ್ಲಿ ಮಧುಗಿರಿಯನ್ನು ಸುಂದರಗೊಳಿಸುತ್ತೇನೆ. ಸರ್ದಾರ್ ಸಿಪಿಐ, ಮಧುಗಿರಿ ಸಿಪಿಐ ಸರ್ದಾರ್ ಪಟ್ಟಣದ ಅವೈಜ್ಞಾನಿಕ ವೃತ್ತಗಳನ್ನು ದುರಸ್ತಿಗೊಳಿಸಿ ಹೈಟೆಕ್ ಸ್ಪರ್ಶ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ಮಾದರಿ. ಇವರಿಗೆ ಇಲಾಖೆಯ ಪರವಾಗಿ ಅಭಿನಂದನೆಗಳು. ಎಂ.ಪ್ರವೀಣ್, ಡಿವೈಎಸ್‌ಪಿ ಮಧುಗಿರಿ ಉಪವಿಭಾಗ