ಕಾವ್ಯ ಪ್ರಶಸ್ತಿಗೆ ಮಧು ಕಾರಗಿ ಆಯ್ಕೆ

BYD MADHU KARAGI
Published on

ಬ್ಯಾಡಗಿ: ಡಾ.ಡಿ.ಎಸ್. ರ್ಕ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಡಿ. 29ರಂದು ಜರುಗುವ 2024ರ ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಗೆ ತಾಲೂಕಿನ ಯುವ ಬರಹಗಾರ್ತಿ ಮಧು ಕಾರಗಿ ಆಯ್ಕೆಯಾಗಿದ್ದಾರೆ.

ಇಲ್ಲಿಯ ಯುವ ಬರಹಗಾರ್ತಿ ರಚಿಸಿದ ‘ತೆರೆಯದ ಬಾಗಿಲು’ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದೆ. ರಾಜ್ಯಮಟ್ಟದಲ್ಲಿ ಒಟ್ಟು ಮೂವರು ಆಯ್ಕೆಯಾಗಿದ್ದು, ಈ ಪೈಕಿ ತಾಲೂಕಿನ ಮಧು ಕಾರಗಿ ಒಬ್ಬರಾಗಿದ್ದಾರೆ.

ಕೆಲ ವರ್ಷಗಳಿಂದ ಕವನ, ಕಾವ್ಯ ಸೇರಿ ವಿವಿಧ ಸಾಹಿತ್ಯ ಬರಹದಲ್ಲಿ ತೊಡಗಿಕೊಂಡು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಶ್ರೀಗಳು, ಟ್ರಸ್ಟ್​ನ ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ಪುಟ್ಟಿ, ಪ್ರೊ.ಗಿರೀಶ ರ್ಕ, ಸತೀಶ ರ್ಕ ಸೇರಿ ಸಾಹಿತಿ, ಕನ್ನಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ. ರಮೇಶ ರ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net