

ಮಧುಗಿರಿ : ವಿಶ್ವದ ಎರಡನೇ ಅತಿದೊಡ್ಡ ಮಧುಗಿರಿ ಏಕಶಿಲಾ ಬೆಟ್ಟವು ಚಾರಣಕ್ಕೆ ಹೆಸರು ವಾಸಿಯಾಗಿದ್ದು, ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸೋದ್ಯಮ ಕೇಂದ್ರವಾಗುವ ಎಲ್ಲ ಅರ್ಹತೆಯಿದ್ದರೂ ಇಚ್ಛಾಶಕ್ತಿ ಕೊರತೆಯಿಂದಾಗಿ ಅದು ಕನಸಾಗಿಯೇ ಉಳಿದಿದೆ.
ವಾರಾಂತ್ಯದಲ್ಲಿ ಬೆಟ್ಟದಲ್ಲಿ ಚಾರಣ ಮಾಡಲು ರಾಜ್ಯದ ವಿವಿಧ ಮೂಲೆಗಳಿಂದ ಯುವ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಬೆಟ್ಟದಲ್ಲಿರುವ ತಾಣಗಳ ರಕ್ಷಣೆಗೆ ಸರ್ಕಾರಗಳು ಸಂಪೂರ್ಣ ನಿರ್ಲಕ್ಷಿಸಿರುವುದರಿಂದ ಬೆಟ್ಟ ಅಭಿವೃದ್ಧಿ ವೇಗ ಕಳೆದುಕೊಂಡು ಸೊರಗುತ್ತಿದೆ.
ಮಧುಗಿರಿ ಬೆಟ್ಟಗುಡ್ಡಗಳಿಂದ ಕೂಡಿರುವ ಆಕರ್ಷಕ ತಾಣವಾಗಿದ್ದು, ಬೆಂಗಳೂರಿನಿಂದ ಸುಮಾರು 106 ಕಿ.ಮೀ, ತುಮಕೂರಿನಿಂದ 42 ಕಿ.ಮೀ. ದೂರದಲ್ಲಿದೆ. ಮೋನೋಲಿತಿಕ್ ಶಿಲೆಯಿಂದ ರೂಪುಗೊಂಡಿರುವ ಏಕಾಶಿಲಾ ಬೆಟ್ಟವು 3,385 ಅಡಿ ಎತ್ತರ, 232 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ.
ಬೆಟ್ಟದಲ್ಲಿ ನಾಲ್ಕು ಗುಹೆಗಳು, 11 ಸುಂದರವಾದ ಗೋಡೆಗಳು, ಭೀಮನ ದೊಣೆ, ನವಿಲು ದೊಣೆ, ಕುದುರೆ ಲಾಯ, ಶಸಾಸ ಸಂಗ್ರಹದ ಉಗ್ರಾಣ, ಅರಮನೆ, ಕಲ್ಲಿನ ಕೋಟೆಗಳು, ಗುಮ್ಮಟಗಳು, ಕಣಜಗಳು ಸೇರಿ ಅನೇಕ ತಾಣಗಳಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಬೆಟ್ಟ ಏರಲು ಪ್ರಾರಂಭಿಸಿದಾಗ ಬೆಟ್ಟದ ತುತ್ತ ತುದಿಯು ಸಮೀಪದಲ್ಲೇ ಇರುವಂತೆ ಭಾಸವಾಗುತ್ತದೆ. ಹೀಗಾಗಿ ಚಾರಣಿಗರು ಸರಿಯಾಗಿ ಅಂದಾಜಿಸದೇ ಬೆಟ್ಟದ ತುತ್ತ ತುದಿಗೆ ಏರಿ ವಾಪಸ್ಸಾಗುವಾಗ ಕತ್ತಲು ಆವರಿಸಿ ದಾರಿ ತಪ್ಪಿದ ಅನೇಕ ನಿದರ್ಶನಗಳೂ ಇವೆ. ರೋಪ್ ವೇ ಅಳವಡಿಸಿದ್ದರೆ ಪ್ರವಾಸಿಗರಿಗೆ ಅನುಕೂಲವಾಗುವ ಜತೆಗೆ ಏಕಶಿಲಾ ಬೆಟ್ಟ ವಿಶ್ವ ಭೂಪಟದಲ್ಲಿ ಮಿಂಚಲಿದೆ. ತಾಲೂಕಿನಲ್ಲಿ ವ್ಯಾಪಾರ ವಹಿವಾಟು ದುಪ್ಪಟ್ಟಾಗಿ ಸ್ಥಳೀಯರಿಗೆ ಉದ್ಯೋಗವೂ ದೊರಕುತ್ತದೆ.
ಬೆಟ್ಟಕ್ಕೆ ರೋಪ್ ವೇ ಮಂಜೂರು ಮಾಡಿಸಿದ್ದರು ರಾಜಣ್ಣ : ಮಧುಗಿರಿ ಪ್ರವಾಸೋದ್ಯಮ ಕೇಂದ್ರವಾಗಬೇಕೆಂದು ನಿರಂತರವಾಗಿ ಒತ್ತಾಯಗಳು ಕೇಳಿ ಬರುತ್ತಿದ್ದವಾದರೂ ಅದಕ್ಕೆ ಜೀವ ತುಂಬಿದವರು ಮಾಜಿ ಶಾಸಕ ಕೆ.ಎನ್.ರಾಜಣ್ಣ. 2015-16ರಲ್ಲಿ ಕೆ.ಎನ್.ರಾಜಣ್ಣ ಶಾಸಕರಾಗಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಆಯವ್ಯಯದಲ್ಲಿ ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಮಂಜೂರು ಮಾಡಿಸಿ ಇದಕ್ಕಾಗಿ 126 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದಲ್ಲದೇ ಸರ್ವೇ ಅಧಿಕಾರಿಗಳೊಂದಿಗೆ ಬೆಟ್ಟಕ್ಕೆ ಚಾರಣ ಕೈಗೊಂಡು ಡೋನ್ ಮೂಲಕ ಪರಿಶೀಲಿಸಿದ್ದರು. ನಂತರ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲಿ ಎಂಬಂತಾಗಿದ್ದು, ಮಧುಗಿರಿ ಜನತೆಯ ರೋಪ್ ವೇ ಕನಸು ನನಸಾಗಲೇ ಇ್ಲ. ನಂತರದ ದಿನಗಳಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಅವರೂ ಅಧಿವೇಶನದಲ್ಲಿ ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಒತ್ತಾಯಿಸಿದ್ದರೂ ಅವರ ಕೂಗು ಸರ್ಕಾರಕ್ಕೆ ಕೇಳಿಸಲೇ ಇ್ಲ.
ಕೃಷ್ಣಮೃಗಗಳ ಬೀಡು : ಮಧುಗಿರಿಯಿಂದ 20 ಕಿಮೀ ದೂರದಲ್ಲಿ ಮೈದನಹಳ್ಳಿ ಅರಣ್ಯಧಾಮವಿದ್ದು, ದೇಶದಲ್ಲಿಯೇ ಅಪರೂಪದ ಚಿಗರೆ ಸಂತತಿಯ ಕೃಷ್ಣಮೃಗಗಳನ್ನು ಇಲ್ಲಿ ಕಾಣಬಹುದು. ಜತೆಗೆ ಕರಡಿಧಾಮ, ಸಿದ್ದರಕಟ್ಟೆ, ಕೋಟೆ ಕ್ಲಪ್ಪನ ಬೆಟ್ಟ, ತಿಮ್ಮಲಾಪುರ ಅಭಯಾರಣ್ಯ, ಬೇಸಿಗೆಯಲ್ಲಿ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿರುವ ಜೋಳದರಾಶಿ ಗುಡ್ಡ, ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ವೆಂಕಟರಮಣ ಸ್ವಾಮಿ ದೇವಸ್ಥಾನ ಮತ್ತು ಊರ ಕಾಯುವ ದಂಡಿನ ಮಾರಮ್ಮತಾಯಿ ದೇವಸ್ಥಾನ ಸೇರಿ ಅನೇಕ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ.
ಇತಿಹಾಸ ಹೇಳುವ ಕೋಟೆ ಹಾಗೂ ಸುಂದರವಾದ ತಾಣಗಳು ಶಿಥಿಲಗೊಳ್ಳುತ್ತಿವೆ. ಇವುಗಳನ್ನು ಸರ್ಕಾರ ಸಂರಕ್ಷಿಸಿದರೆ ಮುಂದಿನ ಪೀಳಿಗೆಗೆ ಬೆಟ್ಟದ ಇತಿಹಾಸ ತಿಳಿಯಲಿದೆ. ಏಕಾಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಕೆಗೆ ಆಗ್ರಹಿಸಿ ಸಹಿ ಸಂಗ್ರಹಣೆ ಮಾಡಿ ರಾಜ್ಯಪಾಲರಿಂದ ಹಿಡಿದು ಶಾಸಕರವರೆಗೂ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗ್ಲಿ.
ಗಾಯತ್ರಿ ನಾರಾಯಣ್, ಅಧ್ಯಕ್ಷೆ ವರದಾಯಿನಿ ಸೇವಾ ಟ್ರಸ್ಟ್
ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದ್ದು, ರೋಪ್ ವೇ ಅಳವಡಿಸಿದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತು, ವ್ಯಾಪಾರ ವಹಿವಾಟಿನ ಜತೆಗೆ ಆರ್ಥಿಕವಾಗಿಯೂ ಸುಧಾರಣೆಯಾಗಲಿದೆ. ಇದರ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಸೋಮಪ್ಪ ಕಡಕೋಳ್, ಉಪವಿಭಾಗಾಧಿಕಾರಿ, ಮಧುಗಿರಿ