ಮಾಧವಾನಂದ ಪ್ರಭೂಜಿ ಪುಣ್ಯಸ್ಮರಣೆ

MADHAVANAND PRABHUJI
Published on

ಉಪ್ಪಿನಬೆಟಗೇರಿ: ಸಮೀಪದ ಪುಡಕಲಕಟ್ಟಿ ಗ್ರಾಮದ ಶ್ರೀ ಗಿರೀಶ ಆಶ್ರಮದಲ್ಲಿ ಮೇ 21ರಂದು ಇಂಚಗೇರಿ ಮಠದ ಮಾಧವಾನಂದ ಪ್ರಭೂಜಿ ಅವರ ಪುಣ್ಯಸ್ಮರಣೆ, ಸಪ್ತಾಹ, ಶ್ರೀ ಗಡ್ಡದಯ್ಯಜ್ಜನ ಗದ್ದುಗೆ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಸಮಾರಂಭ ಜರುಗಲಿದೆ. ಬೆಳಗ್ಗೆ ಶ್ರೀ ಗಡ್ಡದಯ್ಯಜ್ಜನ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯ ಜರುಗಲಿದೆ. ನಂತರ ಪ್ರವಚನ, ಭಜನೆಯೊಂದಿಗೆ ಸಪ್ತಾಹ ಕಾರ್ಯಕ್ರಮ ಮಂಗಲಗೊಳ್ಳುವುದು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು, ಸ್ಥಳೀಯ ಚನ್ನಯ್ಯ ಹಿರೇಮಠ ಸ್ವಾಮೀಜಿ, ಪ್ರಭಯ್ಯ ಚಿಕ್ಕಮಠ ಸಾನ್ನಿಧ್ಯ ವಹಿಸುವರು. ಶಿವಲೀಲಾ ಕುಲಕರ್ಣಿ ಉದ್ಘಾಟಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net