

ಕಡೂರು: ಪಟ್ಟಣದ ಕೋಟೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ 353ನೇ ವರ್ಷದ ಮಧ್ಯಾರಾಧನೆ ಮಹೋತ್ಸವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ ರಾಯರ ಮೃತ್ತಿಕಾ ಬೃಂದಾವನಕ್ಕೆ ಸುಪ್ರಭಾತ ಸೇವೆ ನಂತರ ಲಪುಷ್ಪಾಗಳ ಪಂಚಾಮೃತ ಅಭಿಷೇಕ ನಡೆಸಿದ ನಂತರ ಬೃಂದಾವನಕ್ಕೆ ಬೆಳ್ಳಿ ಕವಚ ಸಮರ್ಪಿಸಿ ಪ್ರಲ್ಹಾದ ರಾಜರ ಮೂರ್ತಿಗೆ ವಿಶೇಷವಾಗಿ ಕನಕಾಭಿಷೇ ನೆರವೇರಿಸಲಾಯಿತು. ಭಕ್ತರು ಅಪ್ಪಣ್ಣಾಚಾರ್ಯರು ರಚಿಸಿದ ಗುರುಸ್ತೋತ್ರ ಪಠಣ ನಡೆಸಿದರು.ಪ್ರಧಾನ ಅರ್ಚಕ ಅಶ್ವಥ್ ನಾರಾಯಣ ಆಚಾರ್ಯಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಬಂದಂತಹ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು.
ಮಠದ ಕಾರ್ಯದರ್ಶಿ ಟಿ.ಆರ್.ಮನು ಮಾತನಾಡಿ, ಶ್ರೀ ಮಠದಲ್ಲಿ ಗುರುರಾಯರ 93ನೇ ವರ್ಷದ ಆರಾಧನಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ನೇರವೇರಿಸಲಾಗಿದೆ. ಲೋಕಕಲ್ಯಾಣರ್ಥ ಧಾರ್ಮಿಕ ಪೂಜಾ ಕೈಕಂರ್ಯಗಳನ್ನು ನಡೆಸಲಾಗಿದೆ. ರಾಯರ ಅನುಗ್ರಹದೊಂದಿಗೆ ಭಕ್ತರಿಗೆ ನೆಮ್ಮೆದಿ ಬದುಕು ಕರುಣಿಸುವಂತಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ರಾಘವೇಂದ್ರ ಸ್ವಾಮಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಪವನ್, ವಿ.ಜಿ.ಒಡೆಯರ್, ಕೃಷ್ಣಮೂರ್ತಿ ಜೋಶಿ, ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ವೈಕುಂಠ ನಕ್ಷತ್ರಿ, ಕೋಟೆ ಭರತ್ ಮತ್ತಿತರಿದ್ದರು.