ಮಾಜಿ ಸಂಸದ ಮಾದೇಗೌಡ ನಿಧನ; ಮೊನ್ನೆಮೊನ್ನೆಯಷ್ಟೇ ಆಸ್ಪತ್ರೆಯಲ್ಲೇ ಆಚರಣೆಯಾಗಿತ್ತು ಜನ್ಮದಿನ..

Madegowda 2
Published on

ಮಂಡ್ಯ: ವಯೋಸಹಜ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿರುವ ಮಾಜಿ ಸಂಸದ ಜಿ. ಮಾದೇಗೌಡ ಅವರ ಜನ್ಮದಿನ ಮೊನ್ನೆಮೊನ್ನೆಯಷ್ಟೇ ಆಸ್ಪತ್ರೆಯಲ್ಲೇ ಆಚರಣೆ ಆಗಿತ್ತು.

ಅನಾರೋಗ್ಯಗೊಂಡಿದ್ದ ಅವರನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದಿಂದ ಅವರು ಹಾಸಿಗೆ ಹಿಡಿದಿದ್ದರೂ ಜುಲೈ 14ರಂದು ಆಸ್ಪತ್ರೆಯ ವೈದ್ಯರು-ಸಿಬ್ಬಂದಿ ಸಹಕಾರದಿಂದ ಜನ್ಮದಿನ ಆಚರಿಸಲಾಗಿತ್ತು.

ಆರೋಗ್ಯ ಹದಗೆಟ್ಟು ಬಳಲಿದ್ದ ಅವರು, ಸ್ವತಂತ್ರವಾಗಿ ಕೇಕ್​ ಕತ್ತರಿಸದಷ್ಟು ನಿತ್ರಾಣಗೊಂಡಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಅವರ ಕೈಯಲ್ಲಿ ಚಾಕು ಇರಿಸಿ, ಆ ಕೈಯನ್ನು ಹಿಡಿದುಕೊಂಡು ಕೇಕ್​ ಕತ್ತರಿಸಿ ಜನ್ಮದಿನವನ್ನು ಆಚರಿಸಿ ಅವರನ್ನು ಸಂತಸ ಪಡಿಸುವ ಪ್ರಯತ್ನ ಮಾಡಿದ್ದರು. ದುರದೃಷ್ಟವಶಾತ್ ಅದಾದ ಮೂರೇ ದಿನಕ್ಕೆ ಅವರು ಎಲ್ಲರನ್ನೂ ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net