

ಮಂಡ್ಯ: ತಾಲೂಕಿನ ಮಾದೇಗೌಡನಕೊಪ್ಪಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಸಿ.ಕರುಣ್ ಕುಮಾರ್, ಉಪಾಧ್ಯಕ್ಷರಾಗಿ ಸುನೀತಾ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
11 ಸದಸ್ಯ ಬಲದ ಸೊಸೈಟಿಯಲ್ಲಿ ಹಿಂದಿನ ಅಧ್ಯಕ್ಷ ಬಿ.ಸಿದ್ದಪ್ಪ ಹಾಗೂ ಉಪಾಧ್ಯಕ್ಷೆ ನಿಂಗಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಕರುಣ್‌ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುನೀತಾ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧದ ಆಯ್ಕೆಯನ್ನು ಚುನಾವಣಾಧಿಕಾರಿ ಎಚ್.ಎಸ್.ಮುಕ್ತ ಘೋಷಣೆ ಮಾಡಿದರು.
ನಿರ್ದೇಶಕರಾದ ಪುಟ್ಟಸ್ವಾಮಿ, ರಾಜು, ಪುಟ್ಟೇಗೌಡ, ರವಿ, ತಿರುಮಲೇಗೌಡ, ಲೋಕೇಶ್, ಚಿಕ್ಕಣ್ಣ, ಬಿ.ಸಿದ್ದಪ್ಪ, ನಿಂಗಮ್ಮ, ಮುಖಂಡರಾದ ನಾಗೇಶ್, ಜಗದೀಶ್, ಅವ್ವೇರಹಳ್ಳಿ ಮಂಜುನಾಥ್, ಚಂದಗಾಲು ಶ್ರೆಧರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹನುಮೇಗೌಡ, ಅನಿಲ್, ಗ್ರಾಪಂ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಲಕ್ಷ್ಮೀ, ವೀಣಾ ರಾಜು ಇತರರಿದ್ದರು.