ಮದ್ದೂರು ಬಂದ್‌ಗೆ ವ್ಯಾಪಕ ಬೆಂಬಲ

28M.D.R.1
Published on

ಮದ್ದೂರು: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಅವೈಜ್ಞಾನಿಕ ತೀರ್ಪು ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳು ಮದ್ದೂರು ಬಂದ್‌ಗೆ ಕರೆ ನೀಡಿವೆ.

ಪಟ್ಟಣದ ಸಂಜಯ ಚಿತ್ರ ಮಂದಿರ ಬಳಿಯಿರುವ ಆಲದ ಮರದ ಬಳಿ ಗುರುವಾರ ಸಭೆ ನಡೆಸಿದ ವಿವಿಧ ಪ್ರಗತಿಪರ ಸಂಘಟನೆಗಳು, ಮದ್ದೂರು ಬಂದ್ ಮೂಲಕ ಕರ್ನಾಟಕ ಬಂದ್ ಬೆಂಬಲಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಂಡವು. ದಲಿತ ಸಂಘಟನೆಗಳ ಮುಖ್ಯಸ್ಥ ಸೊಮನಹಳ್ಳಿ ಅಂದಾನಿ ಮಾತನಾಡಿ, ಕಾವೇರಿಯ ಉಳಿವು, ನಾಡಿನ ಹಿತಕ್ಕಾಗಿ ವರ್ತಕರು ಸ್ವಪ್ರೇರಣೆಯಿಂದ ತಮ್ಮ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಜಾಮಿಯಾ ಶಾದಿ ಕಮಿಟಿ ಆಧ್ಯಕ್ಷ ಆದಿಲ್ ಆಲಿ ಖಾನ್ ಮಾತನಾಡಿ, ಮದ್ದೂರು ಬಂದ್‌ಗೆ ಮುಸ್ಲಿಂ ಸಮಾಜದ ಬೆಂಬಲ ನೀಡಲಿದ್ದು, ಶುಕ್ರವಾರ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಮದ್ದೂರು ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದೊಂದಿಗೆ ಪೇಟೆ ಬೀದಿಯಲ್ಲಿ ಮೆರವಣಿಗೆ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಎಸ್.ಅಶೋಕ್, ರೈತಸಂಘದ ಮುಖಂಡರಾದ ಸೊ.ಶಿ.ಪ್ರಕಾಶ್, ವಳಗೆರೆಹಳ್ಳಿ ಉಮೇಶ್, ಬಿ.ವಿ.ಶಂಕರೇಗೌಡ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ಸೋಮನಹಳ್ಳಿ ಅಂದಾನಿ, ಮರಳಿಗ ಶಿವರಾಜ್, ನ.ಲಿ.ಕೃಷ್ಣ, ಹುಲಿಗೆರೆ ಪುರ ಮಹದೇವ್, ಮೂರ್ತಿ ಚಿಕ್ಕರಸಿನಕೆರೆ, ಬಿ.ವಿ.ಶಂಕರೇಗೌಡ, ಒಕ್ಕಲಿಗರ ಸಂಘದ ಶಿವಲಿಂಗೇಗೌಡ, ಹಾಗಲಹಳ್ಳಿ ಬಸವರಾಜು, ಸುರೇಶ್, ದೇವ್‌ಕುಮಾರ್, ಸವಿತಾ ಸಮಾಜದ ಶಶಿಕುಮಾರ್, ಮ್ಯಾಥ್ಯೂ, ಆದಿಲ್ ಆಲಿಖಾನ್, ಚನ್ನಸಂದ್ರ ರವಿ, ಗೊರವನಹಳ್ಳಿ ಪ್ರಸನ್ನ, ಕುಂದನಕುಪ್ಪೆ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net