ಪರಿಸರ ಸಂರಕ್ಷಣೆಗೆ ಮುಂದಾಗಿ

21-kkr,2(6-24
Published on

ಮದ್ದೂರು: ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಹೇಳಿದರು.
ಭಾರತ್ ವಿಕಾಸ್ ಪರಿಷತ್ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಿಸರ್ಗ ಸಂರಕ್ಷಣೆ ಚಟುವಟಿಕೆಗಳಿಂದ ಮನಕ್ಕೆ ಉಲ್ಲಾಸ ಸಿಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ನಾಗರಿಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದವರು ಹೇಳಿದರು. ಇದೇ ಸಂದರ್ಭ ಹಲವು ಬಗೆಯ ಸಸಿಗಳನ್ನು ಪರಿಷತ್ತಿನ ವತಿಯಿಂದ ನೆಡಲಾಯಿತು. ಕಸಾಪ ತಾಲೂಕು ಮಾಜಿ ಅಧ್ಯಕ್ಷರಾದ ಅಪೂರ್ವಚಂದ್ರು, ಹರ್ಷ, ಮುಖಂಡರಾದ ತಗ್ಗಹಳ್ಳಿ ಚಂದ್ರು. ಚಿಕ್ಕಣ್ಣ, ದಿನೇಶ್, ನಾರಾಯಣ, ಆನಂದ್, ರಾಮಚಂದ್ರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net