ಕಿಸಾನ್ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಗೆ ಚಾಲನೆ

10M.D.R.2
Published on

ಮದ್ದೂರು : ಹೊಸ, ಹೊಸ ಅವಿಷ್ಕಾರಗಳು ಕೃಷಿ ರಂಗದ ಪ್ರಗತಿಗೆ ಪೂರಕವಾಗಲಿ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಬೋರಾಪುರ ಗ್ರಾಮದದಲ್ಲಿ ರೈತ ಬಸವರಾಜು ಜಮೀನಿನಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಯಂತ್ರದ ಮೂಲಕ ಭತ್ತದ ನಾಟಿ, ಬೇಸಾಯ ವಿಷಯ ಕುರಿತ ಕಿಸಾನ್ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.
ಕೂಲಿ ಆಳುಗಳ ಸಮಸ್ಯೆಯಿಂದ ರೈತರಿಗೆ ಬೇಸಾಯ ಮಾಡಲು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ನಾಟಿ ಮಾಡುವ ಯಂತ್ರ ಬಂದಿರುವುದರಿಂದ ರೈತರಿಗೆ ಇದು ಒಂದು ರೀತಿಯಲ್ಲಿ ವರದಾದವಾಗಿದೆ ಎಂದರು.
ನಾಟಿ ಯಂತ್ರದಿಂದ ಕೂಲಿ ಕಾರ್ಮಿಕರ ಸಮಸ್ಯೆ ಪರಿಹಾವಾಗಿದೆ. ಹೆಚ್ಚು ಬಂಡವಾಳದ ಸಮಸ್ಯೆ ಇಲ್ಲದಾಗಿದೆ. ಬಿತ್ತನೆ ಬೀಜ ಸಮಸ್ಯೆ, ಕೀಟಗಳ ಕಾಟ ದೂರವಾಗಿದೆ. ಹಲವು ರೀತಿಯಲ್ಲಿ ರೈತರಿಗೆ ಯಂತ್ರ ಅನುಕೂಲವಾಗಿರುವುದು
ಸಂತೋಷದ ವಿಚಾರ ಎಂದರು. ಗದ್ದೆಯಲ್ಲಿ ನೀರು ಕಡಿಮೆ ಇದ್ದರೆ ಯಂತ್ರ ಸಲೀಸಾಗಿ ಗದ್ದೆಯಲ್ಲಿ ನಾಟಿ ಮಾಡಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net