ಯಳಂದೂರು: ಕರ್ನಾಟಕ ರಂಗಪರಿಷತ್ ಕೇಂದ್ರ ಸಮಿತಿ ಬೆಂಗಳೂರು ಇವರ 2025-26ನೇ ಸಾಲಿನ ರಂಗ ಪರಿಷತ್ ನೀಡಲಾಗುವ ಸಿಜಿಕೆ ರಾಜ್ಯ ಪ್ರಶಸ್ತಿಗೆ ತಾಲೂಕಿನ ಮದ್ದೂರು ಗ್ರಾಮದ ರಂಗಭೂಮಿ ಕಲಾವಿದ ಎಸ್.ಶಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ.
38 ವರ್ಷಗಳ ಕಾಲ ರಂಗಭೂಮಿ, ಜನಪದ ಮತ್ತು ಬೀದಿ ನಾಟಕಗಳ ಮೂಲಕ ಗ್ರಾಮೀಣ ಮಟ್ಟದಲ್ಲಿ ಸಾಮಾಜಿಕ ಪೀಡುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ರಂಗದೇಗುಲ ಸಂಸ್ಥೆಯ ಮೂಲಕ ಹಲವು ಕಲಾವಿದರಿಗೆ ದಾರಿ ದೀಪವಾಗಿ ರಂಗ ಪ್ರಯೋಗಳಗಳ ತರಬೇತಿ ನೀಡಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ನಾಡಿನ ಹಲವರು ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ನಿರಂತರವಾಗಿ ಮಾಡುವ ಮೂಲಕ ಶ್ರಮಿಸಿದ್ದಾರೆ. ಇವರನ್ನು ಗುರುತಿಸಿ ಈಗಾಗಲೇ ಕನ್ನಡ ಜನಪರಿಷತ್ ಪ್ರಶಸ್ತಿ, ಕಲಾರತ್ನ ಪ್ರಸಸ್ತಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಂಗ ಪರಿಷತ್ತು ವತಿಯಿಂದ ಜೂ.27ರಂದು ಚಾಮರಾಜನಗರ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಿಜಿಕೆ ರಂಗಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಂಗ ಪರಿಷತ್ತು ಜಿಲ್ಲಾಧ್ಯಕ್ಷ ಉಮ್ಮತ್ತೂರು ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.