ಬೀಳ್ಕೊಡುಗೆ ಸಮಾರಂಭ

31M.D.R.1
Published on

ಮದ್ದೂರು : ತಾಲೂಕಿನ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪುಟ್ಟರಾಜ ಅವರು ವಯೋನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಶಾಖೆಯಿಂದ ಗೌರವಿಸಿ ಬೀಳ್ಕೊಡಲಾಯಿತು.
ಸಂಘದ ಅಧ್ಯಕ್ಷ ಕೆ. ಬೈರೇಗೌಡ ಈ ಸಂದರ್ಭ ಮಾತನಾಡಿ, ಪುಟ್ಟರಾಜು ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳ ಹಾಗೂ ಪಾಲಕರ ಮನ ಗೆದ್ದಿದ್ದಾರೆ. ಅವರು ಇಂದಿನ ಶಿಕದ್ಷಕರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಕೆ. ಬೈರೇಗೌಡ, ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಶಾಂತರಾಜು, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಸ್.ಕುಮಾರ್, ನಾಗರತ್ನ, ಶಿವಲಿಂಗಯ್ಯ ಮಾತನಾಡಿದರು.
ಮುಖಂಡರಾದ ಎಂ.ಟಿ.ಚಂದ್ರಶೇಖರ್, ಶಿವಣ್ಣ. ಶಿವಕುಮಾರಿ, ಮುರಳೀಧರ, ರಾಜಮ್ಮ, ಸುಧಾ, ಪ್ರೇಮ್ ಕುಮಾರ್, ವೆಂಕಟಲಕ್ಷ್ಮೀ, ರತ್ನಾ, ಮಹಾದೇವು, ಬಸವರಾಜು, ಸುಕನ್ಯಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net