ಕಟ್ಟಡ ನಿರ್ಮಿಸಲು ಬಿಎಮ್‌ಐಸಿ ನಿಯಮ ತೊಡಕು

23M.D.R.2
Published on

ಮದ್ದೂರು : ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಮನೆ ಹಾಗೂ ಇತರೆ ಕಟ್ಟಡ ನಿರ್ಮಾಣ ಮಾಡಲು ಬಿಎಮ್‌ಐಸಿ (ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್) ಪರವಾನಗಿ ತೆಗೆದುಕೊಳ್ಳುವುದು ಕಷ್ಟಕರವಾಗಿದೆ ಎಂದುಮದ್ದೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಂ.ಜಯರಾಮಯ್ಯ ಬೇಸರ ವ್ಯಕ್ತಪಡಿಸಿದರು. ಸಂಘದ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಎಂಐಸಿ ಪರವಾನಗಿ ಪಡೆಯಲು ಕಾನೂನು, ನಿಯಮಗಳನ್ನು ಸಡಿಲಗೊಳಿಸಬೇಕು. ಇಲ್ಲದಿದ್ದರೆ ಜನರಿಗೆ ಕಿರಿಕಿರಿ ತಪ್ಪಿದ್ದಲ್ಲ. ಪಟ್ಟಣದ ಪುರಸಭೆಗೆ ಗೃಹ ಹಾಗೂ ಇತರೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಬೇಕು. ಆಗ ಪುರಸಭೆಗೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲ ಹರಿದು ಬರುತ್ತದೆ. ಇದರಿಂದ ಸಾರ್ವಜನಿಕರಿಗೂ ಸಹಾಯವಾಗುತ್ತದೆ ಎಂದು ಅವರು ಸಲಹೆ ನೀಡಿದರು. ಸಂಘದ 2023-24ನೇ ಸಾಲಿನ ವರದಿಯನ್ನು ಶಿವಣ್ಣ ಮಂಡಿಸಿದರು. ನಿರ್ದೇಶಕರಾದ ಎ.ನಾಗೇಂದ್ರ, ಕೆ.ವಿ.ಪ್ರಸನ್ನ, ಜಿ.ಬಿ.ಜಯರಾಮು, ನಂಜುಂಡಯ್ಯ, ಎಸ್.ಕೆ. ಸುಂದರರಾಜು, ಎಂ.ಎಸ್.ಸಿದ್ದರಾಜು, ಕೆ.ಆರ್.ಮಂಜುನಾಥ್, ಕೆ. ಟಿ.ಸೋಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net