ಮದ್ದೂರು ತಾಲೂಕು ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ: ಡಿಎಚ್‌ಒಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಮನವಿ ಸಲ್ಲಿಕೆ

28_11_Mdy_02(Manavi)
Published on

ಮಂಡ್ಯ: ಮದ್ದೂರಿನ ತಾಲೂಕು ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಅವರಿಗೆ ನಗರದ ಕಚೇರಿಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಟಕದಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಉವಾಶಂಕರ್ ವಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಆಸ್ಪತ್ರೆಯಲ್ಲಿ ವಿವಿಧ ವಿಭಾಗದ ವೈದ್ಯರು ಹಾಗೂ ಚಿಕಿತ್ಸೆ ಲಭ್ಯ ಇರುವ ಬಗ್ಗೆ ಮಾಹಿತಿ ಫಲಕ ಅಳವಡಿಸಿಲ್ಲ. ಚಿಕಿತ್ಸೆಗಳ ವಿವರ, ಸರ್ಕಾರದ ಆಡಳಿತದ ಪ್ರಕಾರ ಉಚಿತ ಎಂಬುದರ ಬಗ್ಗೆ ಮನವರಿಕೆ ವಾಡುವುದು ಅವಶ್ಯವಿದೆ ಎಂದು ಕೋರಿದರು.

ಮಾಹಿತಿ ಫಲಕದಲ್ಲಿ ಸರ್ಕಾರಿ ಆಸ್ಪತ್ರೆಯ ಒಟ್ಟು ಹಾಸಿಗೆಗಳ ಸಂಖ್ಯೆ, ಪ್ರತಿನಿತ್ಯ ಖಾಲಿ ಇರುವುದರ ಬಗ್ಗೆ ನಮೂದಿಸುತ್ತಿಲ್ಲ. ಕಿಡ್ನಿ ಡಯಾಲಿಸಿಸ್ ಸಂಬಂಧ ಯಾವ ಆಧಾರದ ಮೇಲೆ ಡಯಾಲಿಸಸ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವುದರ ಬಗ್ಗೆ ಪೂರ್ಣ ವಿವರ ಹಾಕುತ್ತಿಲ್ಲ. ಆಸ್ಪತ್ರೆಯಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ಅಶುಚಿತ್ವ ನೆಲೆಸಿದೆ. ಆರೋಗ್ಯ ನಿಧಿ ಮತ್ತು ಎಕ್ಸರೇ ಇನ್ನಿತರ ಔಷಧೋಪಕರಣಗಳ ಸಾಮಗ್ರಿಗಳ ಖರೀದಿಯಲ್ಲಿ ಪಾರದರ್ಶಕತೆ ಇಲ್ಲ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಒಬ್ಬರೇ ಮಹಿಳಾ ವೈದ್ಯರಿದ್ದು, ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಸಂಟನೆಯ ಶಿವಲಿಂಗಯ್ಯ, ಸಾಗರ್, ಸುರೇಶ್, ಶ್ರೀನಿವಾಸ್, ಉಮೇಶ್, ಶೇಖರಪ್ಪ, ಹರೀಶ್, ಸಿದ್ದಪ್ಪಾಜಿ, ಮಹಾಲಿಂಗ, ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net