ಕಲಾವಿದ ವೀರಭದ್ರಾಚಾರ್ ಸಾಧನೆ ದೊಡ್ಡದು

21M.D.R.3
Published on

ಮದ್ದೂರು : ಕಲಾ ಕ್ಷೇತ್ರದಲ್ಲಿ ಎಂ.ಆರ್.ವೀರಭದ್ರಾಚಾರ್ ಸಾಧನೆ ದೊಡ್ಡದು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾ ಉಸ್ತುವಾರಿ ತೈಲೂರು ಆನಂದಾಚಾರಿ ಹೇಳಿದರು.
2022ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ವೀರಭದ್ರಾಚಾರ್ ಅಭಿನಂದಿಸಿ ಮಾತನಾಡಿದರು. ವೀರಭದ್ರಾಚಾರ್ ಹಲವು ವರ್ಷಗಳಿಂದ ನಾಟಕ ಹಾಗೂ ರಂಗಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಆರ್.ವೀರಭದ್ರಾಚಾರ್ ಸಾಧನೆ ನಮ್ಮ ಸಮುದಾಯಕ್ಕೆ ದೊಡ್ಡ ಹೆಮ್ಮೆ ಎಂದರು. ವಿರಾಟ್ ವಿಶ್ವ ಕರ್ಮ ಯುವಕರ ಸಂಘದ ತಾಲೂಕು ಅಧ್ಯಕ್ಷ ಬಸವಾಚಾರಿ, ಕಾರ್ಯದರ್ಶಿ ಸತೀಶ್, ಉಪಾಧ್ಯಕ್ಷ ಎಚ್.ಎನ್.ಕುಮಾರಸ್ವಾಮಿ, ಮುಖಂಡರಾದ ಶಿವಕುಮಾರ್, ಲಿಂಗರಾಜು, ಗಣೇಶ್, ಸೋಮಾಚಾರ್, ಸುರೇಶ್, ವಸಂತ, ರವೀಂದ್ರ, ನಾಗೇಂದ್ರ, ಸಿದ್ದಪ್ಪಾಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net