ಹುಳಗನಹಳ್ಳಿ ಗ್ರಾಮದಲ್ಲಿ ತೆಂಗು, ಕಬ್ಬು ಬೆಳೆ ಭಸ್ಮ

oppo_2
oppo_2
Published on

ಮದ್ದೂರು : ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಮಾರು 6 ಎಕರೆ ಪ್ರದೇಶದ ಕಬ್ಬಿನ ಫಸಲು ಹಾಗೂ 10 ತೆಂಗಿನ ಮರ ಬೆಂಕಿಗೆ ಆಹುತಿಯಾಗಿದೆ.
ಮಂಗಳವಾರ ಮಧ್ಯಾಹ್ನ ಗ್ರಾಮದ ಎಚ್.ಇ. ಪ್ರತಿಭಾ, ಶಿವರಾಜ್, ಕೆ.ಪಿ.ಗೀತಾ, ಪುಟ್ಟಮಾಸ್ತಿ ಎಂಬುವರಿಗೆ ಸೇರಿದ್ದ ಕಬ್ಬಿನ ಫಸಲು ಹಾಗೂ ಚೆನ್ಮಮ್ಮ ಅವರಿಗೆ ಸೇರಿದ್ದ ಸುಮಾರು 9 ತೆಂಗಿನ ಮರ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ. ಅಗ್ನಿ ಶಾಮಕ ದಳದವರು ಧಾವಿಸಿ ಬಂದರೂ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಹರಡಿದ್ದ ಪರಿಣಾಮ ಬೆಳೆ ನಾಶವಾಗಿತ್ತು. ಪ್ರಕರಣದಲ್ಲಿ 20 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net