

*ಶಾಸಕ ಕೆ.ಎಂ.ಉದಯ್ ಮನವಿ
ಮದ್ದೂರು: ತೈಲೂರು ಗ್ರಾಮದವರನ್ನು ಗುರುತಿಸಿ ಉತ್ತಮ ಸ್ಥಾನಮಾನಗಳನ್ನು ನೀಡಿದ್ದು, ಈ ಭಾಗದ ನಿವಾಸಿಗಳು, ಮುಖಂಡರು ಅವರ ಬೆನ್ನೆಲುಬಾಗಿ ನಿಂತು ಸಲಹೆ, ಸಹಕಾರ ನೀಡುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ತೈಲೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೂತನ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು ಹಾಗೂ ಪುರಸಭೆ ಉಪಾಧ್ಯಕ್ಷ ಅಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ತಮ್ಮದೇ ಗ್ರಾಮದವರಾದ ಪ್ರಸನ್ನಕುಮಾರ್ ಹಾಗೂ ಚಲುವರಾಜು ಅವರಿಗೆ ಪಕ್ಷವು ಗುರುತಿಸಿ ಉತ್ತಮ ಸ್ಥಾನಮಾನಗಳನ್ನು ನೀಡುವುದರ ಮೂಲಕ ಈ ಭಾಗದ ಜನರ ಒತ್ತಾಸೆಯಾಗಿ ನಿಲ್ಲುವ ಅವಕಾಶವನ್ನು ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಇವರೊಂದಿಗೆ ನಿರಂತರ ವಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದರು.