

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಶ್ರೀ ರೇಣಿಕಾ ಎಲ್ಲಮ್ಮ ದೇವಿ ಸನ್ನಿಧಿಯಲ್ಲಿ 4ನೇ ವರ್ಷದ ವರ್ಧಂತಿ ಅಂಗವಾಗಿ ಬುಧವಾರ ವಿಶೇಷ ಪೂಜೆ, ಮಹೋತ್ಸವ ಅದ್ದೂರಿಯಾಗಿ ನೆರವೇರಿತು.ಭಾರತ ಹುಣ್ಣಿಮೆಯ ಪ್ರಯುಕ್ತ ದೇವಿಗೆ ಪ್ರಧಾನ ಅರ್ಚಕರಾದ ಸತ್ಯಪ್ಪ ಹಾಗೂ ಅರುಣ್ ಅವರು ಪೂಜಾ ವಿಧಿಗಳನ್ನು ಶಾಸ್ತ್ರ ವಿಧಿಯನ್ವಯ ನೆರವೇರಿಸಿದರು. ದೇವಸ್ಥಾನಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಬೆಸಗರಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಊರುಗಳ ಭಕ್ತರು ಭಾಗವಹಿಸಿದ್ದರು.