

ಕದರೀಪುರ: ಕೋಲಾರ ತಾಲೂಕು ಮದ್ದೇರಿಯಲ್ಲಿ ಹನುಮ ಜಯಂತಿ ಮತ್ತು ಹುಣ್ಣಿಮೆ ಪ್ರಯುಕ್ತ ಶ್ರೀ ಕೋದಂಡರಾಮಸ್ವಾಮಿಯ 68ನೇ ಬ್ರಹ್ಮರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.
ಅರ್ಚಕರಾದ ಪಿ.ವೆಂಕಟಾಚಲಪತಿ, ಕೆ.ಎಲ್.ವೇಣುಗೋಪಾಲಾಚಾರ್, ಪುರುಷೋತ್ತಮಾಚಾರ್ ಹಾಗೂ ವೃಂದದವರು ರಥಕ್ಕೆ ಕಳಶ ಸ್ಥಾಪನೆ ಹಾಗೂ ಪೂಜಾ ಕಾರ್ಯ ನೆರವೇರಿಸಿಕೊಟ್ಟರು.
ಮಧ್ಯಾಹ್ಮ 12.30ಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ರಥಕ್ಕೆ ಹೂವು, ದವನ, ಬಾಳೆ ಹಣ್ಣು, ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ದೇವರ ಪೂಜಾ ಕೈಂಕರ್ಯಗಳಲ್ಲಿ ನೆರೆದಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಂಚಿದರು.
ಗ್ರಾಮಸ್ತರಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಕೋದಂಡರಾಮಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, ಮತ್ತು ವರದರಾಜಸ್ವಾಮಿಪಲ್ಲಕ್ಕಿ ಉತ್ಸವ ನೆರವೇರಿತು.
ಮದ್ದೇರಿ ಸೊಸೈಟಿ ಅಧ್ಯ ಚಂಜಿಮಲೆ ಬಿ.ರಮೇಶ್, ಮಾಜಿ ಅಧ್ಯ ಎಂ.ಆರ್.ಶ್ರೀನಿವಾಸಗೌಡ, ನಿರ್ದೇಶಕ ಎನ್.ನಾಗರಾಜ್, ಕಾಂಗ್ರೆಸ್ ಮುಖಂಡ ಉರಟಿ ಅಗ್ರಹಾರ ಚೌಡರೆಡ್ಡಿ, ಟೊಮ್ಯಾಟೊ ಮಂಡಿ ಮಾಲೀಕ ತಿಪ್ಪೇನಹಳ್ಳಿ ನಾಗೇಶ್, ಮೈಲಂಡಹಳ್ಳಿ ಮುರಳಿ, ಗ್ರಾಪಂ ಸದಸ್ಯರಾದ ಚಂದ್ರೆಗೌಡ, ವೆಂಕಟಸ್ವಾಮಿ, ಮಲ್ಲಾಂಡಹಳ್ಳಿ ಪ್ರಕಾಶ್, ನಾಗವೇಣಮ್ಮ, ಹೊನ್ನಕುಮಾರ್, ಜಿ.ಕೃಷ್ಣಪ್ಪ ನಾಯಕ್, ಕಲಾವಿದ ಪಿ.ಮುನಿರೆಡ್ಡಿ, ಹೊಗರಿ ಬೈರಪ್ಪ ಇದ್ದರು.