ಹಾನಿಯಾಗಿರುವ ಮನೆಗಳ ದುರಸ್ತಿ - ಕ್ವಾರಿ ಮಾಲೀಕರ ಸಭೆಯಲ್ಲಿ ಅಶೋಕ್ ರೈ ಸೂಚನೆ

PTR_15 MAR_2
Published on

ಪುತ್ತೂರು: ಕ್ವಾರಿಗಳಲ್ಲಿ ಮನೆಗಳಿಗೆ ಹಾನಿಯಾಗದ ರೀತಿಯಲ್ಲಿ ಕೆಲಸ ನಡೆಯಬೇಕು. ಕ್ವಾರಿಗಳೂ ಅಗತ್ಯವಿದ್ದು, ಮನೆಯವರಿಗೂ ಸಮಸ್ಯೆಯಾಗಬಾರದು. ಹಾನಿಯಾಗಿರುವ ಎಲ್ಲ ಮನೆಗಳನ್ನು ದುರಸ್ತಿ ಮಾಡಿಕೊಡಬೇಕು. ಎರಡು ಮನೆಗೆ ಸರಿಯಾದ ವ್ಯವಸ್ಥೆ ಮಾಡಿಕೊಡಿ. ಇಲ್ಲದಿದ್ದರೆ ಕ್ವಾರಿಗಳನ್ನು ಬಂದ್ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ಖಡಕ್ ಎಚ್ಚರಿಕೆ ನೀಡಿದರು.

ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಡತ್ತಡ್ಕ ಸೋಟದ ಕುರಿತು ಅಽಕಾರಿಗಳ ಹಾಗೂ ಕ್ವಾರಿ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ವಿಟ್ಲ ಹೋಬಳಿ ಉಪತಹಸೀಲ್ದಾರ ನವೀನ್ ಕುಮಾರ್ ಮಾತನಾಡಿ, ಕ್ವಾರಿ ಸ್ಟೋಟದಿಂದ ಸುಮಾರು ೩೬ ಮನೆಗೆ ಹಾನಿಯಾಗಿದೆ. ಎರಡು ಮನೆಗೆ ತೀವ್ರ ಹಾನಿಯಾಗಿದ್ದು, ಅದನ್ನು ಸರಿಪಡಿಸಲಾಗಿದೆ. ಈಗಾಗಲೇ ಒಟ್ಟು ೧೩ಮನೆಗಳನ್ನು ದುರಸ್ತಿಗೊಳಿಸಲಾಗಿದ್ದು, ೨೩ ಮನೆ ಬಾಕಿ ಇದೆ ಎಂದು ತಿಳಿಸಿದರು.

ಬಾಕಿ ಇರುವ ೨೩ ಮನೆಗಳ ಪೈಕಿ ಎರಡು ಮನೆಗಳಲ್ಲಿ ಒಂದು ಮನೆ ಮರು ನಿರ್ಮಾಣ ಹಾಗೂ ಇನ್ನೊಂದು ಮನೆಗೆ ೧.೫ ಲಕ್ಷ ರೂ. ಪರಿಹಾರ ನೀಡುವ ಜತೆಗೆ ೨೧ ಮನೆಗಳಿಗೆ ತಲಾ ೧೫ ಸಾವಿರ ರೂ. ಅಥವಾ ದುರಸ್ತಿ ಮಾಡಿಕೊಡುವ ವಿಚಾರಕ್ಕೆ ಎಲ್ಲರೂ ಸಮ್ಮತಿಸಿದರು.

ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿ ನವೀನ್ ಭಂಡಾರಿ, ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ರವಿ ಎಂ. ಎನ್., ವಿಟ್ಲ ಮುಡ್ನೂರು ಗ್ರಾಮಕರಣಿಕ ಸುತೀಶ್ ಸುವರ್ಣ, ಗ್ರಾಮ ಸಹಾಯಕ ರುಕ್ಮಯ್ಯ ಮೂಲ್ಯ, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಪಿಡಿಒ ಸುಜಯ ಕೆ., ಪ್ರಮುಖರಾದ ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ರಾಮಣ್ಣ ಪಿಲಿಂಜ, ಜನಾರ್ದನ ಪೂಜರಿ ಪೆರುವಾಜೆ, ವಿಜಯಲಕ್ಷ್ಮಿ ಸ್ಟೋನ್ ಕ್ರಶರ್ ನ ಯತೀಶ್, ಎನ್. ಎಸ್. ಕ್ರೆಶರ್ ನ ಪಿ. ಅಬ್ದುಲ್ಲ ಕುಂಞಿ, ಬಿ.ಎ. ಕ್ರೆಶರ್ ನ ರಿಯಾಝ್, ಸಂತೋಷ್ ಕ್ರೆಶರ್ ನ ಸಂತೋಷ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net