

ಸಿಂಧನೂರು: ಮಾಡಸಿರವಾರ ಗ್ರಾಮದಲ್ಲಿ ಘನಮಹಿಮ ಶ್ರೀ ಕರಿಯಪ್ಪ ತಾತನ ಜಾತ್ರೆ ಹಿನ್ನೆಲೆಯಲ್ಲಿ ಶ್ರಾವಣ ಮೊದಲ ಸೋಮವಾರ ಉಚ್ಚಾಯ ಸೇವೆ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಕರಿಯಪ್ಪ ತಾತನ ಮೂರ್ತಿಗೆ ಮಹಾರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜಾ ಕೈಂಕರ್ಯ ನಡೆದವು. ಸುಮಂಗಲೆಯರಿಂದ ಕುಂಭ-ಕಳಸ ಮೆರವಣಿಗೆ ನಡೆಯಿತು. ನಂತರ ದೇವಸ್ಥಾನದ ಆವರಣದಲ್ಲಿ ಡೊಳ್ಳು ಕುಣಿತ ನಡೆಯಿತು. ಸಂಜೆ 5 ಕ್ಕೆ ಕರಿಯಪ್ಪ ತಾತನ ಉಚ್ಚಾಯ ಸೇವೆ ಜರುಗಿತು. ಬಾದರ್ಲಿ, ಅಲಬನೂರು, ಕನ್ನಾರಿ, ಗೋಮರ್ಸಿ, ಬೆಳಗುರ್ಕಿ ಹಾಗೂ ಸುತ್ತಲಿನ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.