ಬಸ್ ಸಂಚಾರದಿಂದ ಜನರಿಗೆ ಅನುಕೂಲ

Untitled design(24)
ಮಸ್ಕಿ ತಾಲೂಕಿನ ಮ್ಯಾದರಾಳ ತಾಂಡಾಕ್ಕೆ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಡಿಪೋ ಮ್ಯಾನೇಜರ್ ಆದಪ್ಪ, ಗ್ರಾಮಸ್ಥರಾದ ಈರಪ್ಪ, ಚಂದಪ್ಪ, ಚಂದ್ರು, ಕೃಷ್ಣ ಇನ್ನಿತರರಿದ್ದರು.
Published on

ಮಸ್ಕಿ: ತಾಲೂಕಿನ ಮ್ಯಾದರಾಳ ತಾಂಡಾದಲ್ಲಿ ಬಸ್ ಸಂಚಾರಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭಾನುವಾರ ಚಾಲನೆ ನೀಡಿದರು.

ಸಮಸ್ಯೆ ತಪ್ಪಿಸಲು ಸಾರಿಗೆ ಸೌಲಭ್ಯ

ಮಸ್ಕಿ ಕ್ಷೇತದಲ್ಲಿ ಕೆಲವು ಗ್ರಾಮಗಳಿಗೆ ಹಲವು ವರ್ಷಗಳಿಂದ ಬಸ್ ಸಂಚಾರವಿಲ್ಲದೇ ಜನರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸಲು ಮ್ಯಾದರಾಳ ತಾಂಡಾಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಬಸ್ ಸಂಚಾರದಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸಕಾಲದಲ್ಲಿ ಪಟ್ಟಣ ಪ್ರದೇಶಗಳಿಗೆ ಹೋಗಲು ಅನುಕೂಲವಾಗಲಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.

ಮಸ್ಕಿಯಿಂದ ಅಂತರಗಂಗಿ ಕ್ರಾಸ್, ಮ್ಯಾದರಾಳ, ಅಂತರಗಂಗಿ ತಾಂಡಾ ಮಾರ್ಗ ಮೂಲಕ ಮ್ಯಾದರಾಳ ತಾಂಡಾಕ್ಕೆ ಸಂಚಾರ ಮಾಡಲಿದೆ ಎಂದು ಘಟಕ ವ್ಯವಸ್ಥಾಪಕ ಆದಪ್ಪ ತಿಳಿಸಿದರು. ಗ್ರಾಮಸ್ಥರು ಶಾಸಕರನ್ನು ಗೌರವಿಸಿದರು. ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net