ಮದರಕಲ್ ಗ್ರಾಮದಲ್ಲಿ ಶಿಷ್ಟಾಚಾರದಂತೆ ನೆರವೇರಿದ ಕ್ವಾರಂಟೈನ್‌ನಲ್ಲಿ ಮೃತಪಟ್ಟ ಬಾಲಕನ ಅಂತ್ಯಕ್ರಿಯೆ

050620 Devadurga Corona Dead Body Funeral
Published on

ದೇವದುರ್ಗ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆಯಲಾದ ಕ್ವಾರಂಟೈನ್ ಕೇಂದ್ರದಲ್ಲಿ ಹೊಟ್ಟೆ ನೋವಿನಿಂದ ಮೃತಪಟ್ಟ ಬಾಲಕನನ್ನು ತಾಲೂಕಿನ ಮದರಕಲ್ ಗ್ರಾಮದಲ್ಲಿ ಆರೋಗ್ಯ ಇಲಾಖೆ ಶಿಷ್ಟಾಚಾರದಂತೆ ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

15 ದಿನಗಳ ಹಿಂದೆ ಮುಂಬೈನಿಂದ ಮರಳಿ ಬಂದಿದ್ದ ಬಾಲಕನನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಬುಧವಾರ ತಡರಾತ್ರಿ ಹೊಟ್ಟೆನೋವಿನಿಂದ ಬಾಲಕ ನರಳುತ್ತಿದ್ದು, ಗುರುವಾರ ಬೆಳಗ್ಗೆ 4ಗಂಟೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಟೆಸ್ಟ್‌ಗೆ ಕಳಿಸಿದ್ದ ಬಾಲಕನ ರಕ್ತದ ಮಾದರಿ ಹಾಗೂ ಗಂಟಲು ದ್ರವದ ವರದಿ ನೆಗೆಟಿವ್ ಬಂದಿದ್ದು, ಮರಣದ ನಂತರ ಮತ್ತೊಮ್ಮೆ ಗಂಟಲು ದ್ರವ ಟೆಸ್ಟ್‌ಗೆ ಕಳಿಸಲಾಗಿದ್ದು, ಶುಕ್ರವಾರ ಬಂದ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಮೃತ ಬಾಲಕನನ್ನು ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net