ಮಾದಾರ ಚೆನ್ನಯ್ಯ ಜಯಂತ್ಯುತ್ಸವ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ (ಪರಿಶಿಷ್ಟ ಜಾತಿ) ಆಶ್ರಯದಲ್ಲಿ ಕುಲಗುರು ಮಾದಾರ ಚೆನ್ನಯ್ಯ ಜಯಂತ್ಯುತ್ಸವವನ್ನು ಡಿ.29ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್​ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ.

ಮಹಾದೇವ ಹುಲಗೆಜ್ಜಿ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜು ಪ್ರಾಧ್ಯಾಪಕ ಡಾ. ವಿಶ್ವನಾಥ ಎಂ., ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ, ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಗಂಗಾಧರ ದೊಡ್ಡಮನಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಉಪನ್ಯಾಸಕ ಡಾ. ಮಾಲತೇಶ ಪೂಜಾರ ಉಪನ್ಯಾಸ ನೀಡುವರು. ಮಹಾಸಭಾ ಅಧ್ಯಕ್ಷ ಪಿ. ವೆಂಕಪ್ಪ ಅಧ್ಯಕ್ಷತೆ ವಹಿಸುವರು. ಯಲ್ಲಪ್ಪ ಹುಲಮನಿ, ಹನುಮಂತಪ್ಪ ಕಾಳಿ, ಲಕ್ಷ್ಮೀಬಾಯಿ ಹರಿಜನ ಅವರಿಗೆ ಗೌರವಿಸಲಾಗುವುದು. ಮಹಾಸಭಾ ಉಪಾಧ್ಯಕ್ಷ ಮರಿಯಪ್ಪ ನಾಗಣ್ಣವರ, ಕೋಶಾಧ್ಯಕ್ಷ ಆಂಜನೇಯ ಆರ್ವೇಡ ಸೇರಿ ಇತರರು ಪಾಲ್ಗೊಳ್ಳುವರು.

ಜಯಂತ್ಯುತ್ಸವ ನಂತರ ಮಾದಿಗ ಮಹಾಸಭಾದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ಎಸ್​. ಬಂಗಾರಿ ಮತ್ತು ಸಹ ಕಾರ್ಯದರ್ಶಿ ಪಿ.ಡಿ. ಬಸನಾಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net