ಕಲ್ಲುಗಣಿಗಾರಿಕೆ ತಾತ್ಕಲಿಕವಾಗಿ ಸ್ಥಗಿತಗೊಳಿಸಿ

Untitled design (2)
Published on

ಹರಪನಹಳ್ಳಿ: ಪಟ್ಟಣ ಸಮೀಪದ ಮಲಿಯಮ್ಮ ದೇವಸ್ಥಾನದ ಬಳಿ ಮಾದಾಪುರಕ್ಕೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಸ್ಫೋಟದ ತೀವ್ರತೆಗೆ ಹಾನಿ

ಕೆ.ಎಂ.ಬಸವರಾಜಯ್ಯ ಹಾಗೂ ಗ್ರಾಮಸ್ಥರು ಕಲ್ಲು ಗಣಿಗಾರಿಕೆ ಸಮಯದಲ್ಲಿ ಅವೈಜ್ಞಾನಿಕವಾಗಿ ಸ್ಫೋಟ ಮಾಡಲಾಗುತ್ತಿದೆ. ಎರಡು ಕಲ್ಲು ಕ್ವಾರಿಗಳಿಂದ 70 ರಿಂದ 80 ಅಡಿ ಆಳದವರೆಗೆ ಅತ್ಯಂತ ತೀವ್ರವಾಗಿ ಸ್ಫೋಟಿಸಲಾಗುತ್ತಿದೆ. ಇದರಿಂದ 10 ರಿಂದ 12 ಕಿ.ಮೀ.ವರೆಗೆ ಭೂಮಿ ಕಂಪನವಾಗಿ ಜನ ಮತ್ತು ಜಾನುವಾರು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ ಐತಿಹಾಸಿಕ ದೇವಾಲಯಗಳಿಗೆ ಹಾನಿಯಾಗಲಿದೆ ಎಂದು ದೂರು ನೀಡಿದ್ದರು. ದೂರಿನ ಅನ್ವಯ ಬಳ್ಳಾರಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಅಧಿಕಾರಿಗಳ ತಂಡ ಮಾದಾಪುರ ಸರ್ವೇ ನಂಬರ 429/1 ಹಾಗೂ 429 ಬಿ. ಕಲ್ಲು ಗಣಿಗಾರಿಕೆ ಪ್ರದೇಶವನ್ನು ಪರಿಶೀಲಿಸಿದರು.

ಇದನ್ನೂ ಓದಿ:

ಗಣಿ ಮತ್ತು ಭೂ ವಿಜ್ಞಾನ ಸುರಕ್ಷತಾ ಜಿಲ್ಲಾ ಉಪ ನಿರ್ದೇಶಕರು ನಾಗೇಂದ್ರ ಕುಮಾರ ಜಯರಾಮ್ ಮಾತನಾಡಿ, ಪ್ರದೇಶದ ಕಲ್ಲುಗಣಿಗಾರಿಕೆ ಕುರಿತು ತಾಂತ್ರಿಕ ಹಾಗೂ ವೈಜ್ಞಾನಿಕ ಅಧ್ಯಯನ ಮಾಡಬೇಕಾಗಿದೆ. ವರದಿ ಬಳಿಕ ನಿಯಮಾನುಸಾರವಾಗಿ ಕ್ರಮಕೈಗೊಳ್ಳಲಾಗುವುದು. ತಾಂತ್ರಿಕ ಹಾಗೂ ವೈಜ್ಞಾನಿಕ ಅದ್ಯಯನಕ್ಕೆ ಒಂದು ದಿನ ನಿಗದಿಗೊಳಿಸಲಾಗುವುದು. ಅಲ್ಲಿಯವರೆಗೂ ಯಾವುದೇ ಬ್ಲಾಸ್ಟಿಂಗ್ ಕಾರ್ಯ ಸೇರಿದಂತೆ ಕಲ್ಲುಗಣಿಗಾರಿಕೆ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಕಲ್ಲು ಗಣಿಗಾರಿಕೆಯ ಗುತ್ತಿಗೆದಾರರಿಗೆ ಸೂಚಿಸಿದರು.


ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಾದ ಧರಣೇಶ್, ಮಂಜನಾಥ ಬಿ., ದೂರುದಾರ ಕೆ.ಎಂ.ಬಸವರಾಜಯ್ಯ, ಪುರಸಭಾ ಮಾಜಿ ಅಧ್ಯಕ್ಷ ಹರಾಳು ಅಶೋಕ, ಪಿ.ಪ್ರಸನ್ನ, ಬಾಗಳಿ ಮಂಜುನಾಥ, ಎಸ್.ಎಂ.ಗಿರೀಶ, ಕೆ.ಎಂ.ಸಚಿನ್, ಸಿಪಿಐ ನಾಗರಾಜ ಎಂ.ಕಮ್ಮಾರ, ಪಿಎಸ್‌ಐ ಶಂಭುಲಿಂಗ ಹಿರೇಮಠ, ಜಿ.ವೆಂಕಟೇಶ, ಗುತ್ತಿಗೆದಾರ ಸಲೀಂ, ದಾದಾ ಖಲಂದರ ಸೇರಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net