ಮದನಿ ಆರ್ಟ್ ಫೆಸ್ಟಿವಲ್ ಸಮಾರೋಪ

New Project (60)
Published on

ಉಳ್ಳಾಲ: ಸಯ್ಯಿದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಶರೀಅತ್ ಕಾಲೇಜು ವಿದ್ಯಾರ್ಥಿಗಳ ಆರ್ಟ್ ಫೆಸ್ಟಿವಲ್ ಸಮಾರೋಪ ಸಮಾರಂಭ ಸಯ್ಯಿದ್ ಮದನಿ ಆಡಿಟೋೀರಿಯಂನಲ್ಲಿ ನಡೆಯಿತು.

‘ಎನಿಗ್ಮ’ ಎಂಬ ಶೀರ್ಷಿಕೆಯಡಿ ಮೂರು ವೇದಿಕೆಗಳಲ್ಲಿ 200ಕ್ಕೂ ಅಧಿಕ ಸ್ಪರ್ಧೆಗಳು ನಡೆದಿದ್ದು, ಜೂನಿಯರ್, ಸಬ್ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ 250ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ಸಯ್ಯಿದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳಿಂದ ಉಳ್ಳಾಲ ಬಣ್ಣಬಣ್ಣದ ಮೆರವಣಿಗೆ ನಡೆಯಿತು.

ಮೂರು ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ‘ಬೈಜಾಂಟಿನ್ ಬ್ಲಾಸರ್ಸ್’ ಚಾಂಪಿಯನ್ ಆಗಿದ್ದು, ‘ರೋಮನ್ ರಾಪರ್ಸ್’ ಪ್ರಥಮ ರನ್ನರ್‌ಅಪ್ ಹಾಗೂ ‘ಚೆರೋಕೀ ಚೇಸರ್ಸ್’ ದ್ವಿತೀಯ ರನ್ನರ್‌ಅಪ್ ಸ್ಥಾನ ಪಡೆಯಿತು.

ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಹುಸೈನ್ ತಂಙಳ್ ವಾಡಾನಪ್ಪಳ್ಳಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. ಕೋಶಾಧಿಕಾರಿ ನಾಜಿಮುರ್ರಹ್ಮಾನ್, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕಾರ್ಯದರ್ಶಿಗಳಾದ ಇಶಾಕ್, ಮುಸ್ತಫಾ ಮದನಿನಗರ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ನಜೀಬ್ ನೂರಾನಿ, ನುಹ್ಮಾನ್ ನೂರಾನಿ, ತಸ್ಲೀಂ ನೂರಾನಿ, ಬಶೀರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

ಇಬ್ರಾಹಿಂ ಅಹ್ಸನಿ ಮಂಜನಾಡಿ ಸ್ವಾಗತಿಸಿದರು. ಬಾಸಿಂ ವಂದಿಸಿದರು. ಅಸದುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net