

ವಿಜಯವಾಣಿ ಸುದ್ದಿಜಾಲ ಆರ್ಡಿ
ಮಾಡು ಒಲ್ಲದ ಖ್ಯಾತಿಯ ಮಡಾಮಕ್ಕಿ ಶ್ರೀ ಮಹತೋಭಾರ ವೀರಭದ್ರ ದೇವಸ್ಥಾನದಲ್ಲಿ ನೂತನ ಸ್ವಾಗತ ಗೋಪುರ ಲೋಕಾರ್ಪಣೆ, ಜಾತ್ರಾ ಮಹೋತ್ಸವ, ಕೆಂಡಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಸಂಪನ್ನಗೊಂಡಿತು.
ದೇವಳ ಮುಖ್ಯ ರಸ್ತೆಯಲ್ಲಿ ದಿ.ಸಾದಮ್ಮ ಶೆಟ್ಟಿ ಮತ್ತು ದಿ.ಪಠೇಲ್ ಕೆ.ಭೋಜ ಶೆಟ್ಟಿ ಸ್ಮರಣಾರ್ಥ ನೂತನವಾಗಿ ನಿರ್ಮಾಣಗೊಂಡ ಸ್ವಾಗತ ಗೋಪುರ ಲೋಕಾರ್ಪಣೆ, ಗಣೇಶ ಪ್ರಾರ್ಥನೆ, ಪುಣ್ಯಾಹ, ನವಕ ಪ್ರಧಾನ ಹೋಮ ಕಲಶ, ಶತ ರುದ್ರಾಭಿಷೇಕ, ಮಹಾಪೂಜೆ, ತುಲಾಭಾರ ಸೇವೆ, ಅನ್ನಸಂತರ್ಪಣೆ, ಯಕ್ಷಗಾನ ನೃತ್ಯ ಸೇವೆ, ಶ್ರೀ ಸ್ವಾಮಿ ಹಾಗೂ ಅಮ್ಮನವರ ದರ್ಶನ, ಕೆಂಡ ಸೇವೆ, ಪರಿವಾರ ದೈವಗಳ ಕೋಲ, ದರ್ಶನ, ರಂಗ ಪೂಜೆ, ಡಮರು ಸೇವೆ, ವ್ಯಾಘ್ರ ಚಾಮುಂಡಿ ದರ್ಶನ, ಸುತ್ತು ಬಲಿ, ಸ್ವಾಮಿ ದರ್ಶನ, ಪ್ರಸಾದ ವಿತರಣೆ ನೆರವೇರಿತು.
ದೇವಳ ಆಡಳಿತದಾರ ಎಂ.ಅನಂತ ಮಂಜ, ಎಂ.ಚಂದ್ರ ಮಂಜ, ಮಡಾಮಕ್ಕಿ, ಪಾತ್ರಿ ರಮೇಶ ಸೋಮಯಾಜಿ ಬಚ್ಚಪ್ಪು, ವಿಶ್ವನಾಥ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಶಶಿಧರ ಶೆಟ್ಟಿ, ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ ಒಳಬೈಲು, ಮಡಾಮಕ್ಕಿ ಮೇಳ ಸಂಚಾಲಕ ಕಿಶನ್ ಹೆಗ್ಡೆ ಪಳ್ಳಿ, ದಿ.ಸಾದಮ್ಮ ಶೆಟ್ಟಿ ಮತ್ತು ದಿ.ಪಠೇಲ್ ಕೆ.ಭೋಜ ಶೆಟ್ಟಿ ಕುಟುಂಬಸ್ಥರು ಪಾಲ್ಗೊಂಡಿದ್ದರು.